- By Bhavatarini Rao
- Monday, February 1st, 2021
ಬೆಂಗಳೂರಲ್ಲಿ ಗಾಡಿ ಓಡಿಸೋದು ನನ್ನಂತೋರಿಗೆ ದೊಡ್ಡ ಸಾಹಸನೇ !! ಏನ್ ಮಾಡೋದು … ಹೊಟ್ಟೆ ಪಾಡು.. ಬೆಂದಕಾಳೂರಿಗೆ ಬಂದಿದ್ದಂತೂ ಆಯ್ತು.. ಇನ್ನು ನಮ್ಮ ಬೇಳೆ ಕಾಳು ಕೂಡ ಸ್ವಲ್ಪ ಬೇಯ್ಸ್ಕೊಬೇಕಲ್ಲ..!! ಅಲ್ವ?
ನಿನ್ನೆ ಹೀಗೆ ಗಾಡಿ ಓಡಿಸ್ಕೊಂಡು ಬರ್ತಾ ಇದ್ದೆ.. ಹೆಸರಘಟ್ಟ main road ಅಲ್ಲಿ Royal Enfield ಗಳು ರಾಯಲ್ ಆಗ್ ಓಡಾಡ್ತಾ ಇತ್ತು.. ನನ್ Suzuki Lets ಕೂಡ ಪಾಪ ಚೆನ್ನಾಗೇ ಓಡ್ತಾಇತ್ತು ಬಿಡಿ.. ಹಾಗೆಲ್ಲ compare ಮಾಡಕ್ ಹೋಗ್ಬಾರ್ದು .. shhhhh 😛
ಹೂ.. ಮುಂದೆ ಕೇಳಿ..
ನಾನ್ ಗಾಡಿ ಓಡಿಸ್ತಾ ಇದ್ನಾ.. ಯಾವೋನೋ ಒಬ್ಬ ಬಂದ ಗುರು.. ನನ್ನ ಹಿಂದೆ .. ಅವನು ಕೂಡ ನಮ್ Suzuki ಫ್ಯಾಮಿಲಿ ನೇ.. ಆದ್ರೆ ಅವನ್ದು OMNI ಕಾರ್.. ಕನ್ನಡಿಯಲ್ಲಿ ನೋಡಿದೆ ನಾನು .. ಸುಮ್ಮ್ನಾದೆ .. ನನ್ ಮುಂದೆ ಹೋಗಲೂ ಬೇಡವೂ ಅಂತ ಸಿಟಿ ಬಸ್ ಹೋಗ್ತಾ ಇತ್ತು.. ತಲೆ ಮೇಲೆ ತಲೆ ಬೀಳಲಿ.. ಬಸ್ ನ overtake ಮಾಡೋ ಮಗಳು ಅಲ್ಲವೇ ಅಲ್ಲ ನಾನು.. ಅಷ್ಟೆಲ್ಲ ಮೀಟರ್ ಇಲ್ಲ ನಂಗೆ.. ಆರಾಮಾಗ್ ಬಸ್ ಹಿಂದೆ ಹಿಂದೆ ನೇ ಹೋಗ್ತಾ ಇದ್ದೆ good girl ತರ..
ಆದ್ರೆ.. ನನ್ನಲ್ಲಿರೋ patience omni ಅವನಿಗೆ ಇರಲಿಲ್ಲ.. ಶುರು ಮಾಡಿದ “ಪೋಮ್ ಪೋಮ್ ” ಅಂತ horn ಮಾಡೋಕೆ.. ನಾನ್ ಅಷ್ಟಕ್ಕೆಲ್ಲ ತಲೆ ಕೆಡಿಸ್ಕೊತಿನಾ?? no wayyyyy .. Chance ಎ ಇಲ್ಲ…! ನನ್ ಪಾಡಿಗ್ ಸಿವಾ ಅಂತ ಬಸ್ ಹಿಂದೆ ಹೋಗ್ತಾ ಇದ್ದೆ.. ‘ಬೇಕಿದ್ರೆ ನೀನು ನನ್ನ overtake ಮಾಡ್ಕೋ.. ಬಸ್ ನು overtake ಮಾಡ್ಕೋ… ಏನಾದ್ರೂ ಮಾಡ್ಕೋ ‘ ಅಂತ..
ಆದ್ರೆ ಅವನು overtake ಮಾಡಲಿಲ್ಲ .. ಕಿರಿದಾದ ರಸ್ತೆ ಅಂತ ಇರ್ಬೋದು.. ಅಥವಾ.. ಅವನು ನನ್ ತರ ನೇ ಇರ್ಬೋದು.. ಹ್ಹ ಹ್ಹ… ಆದ್ರೆ ಪುಣ್ಯಾತ್ಮನ “ಪೋಮ್ ಪೋಮ್ ” ಮಾತ್ರ ನಿಲ್ಲಲಿಲ್ಲ.. ಬೇಡಾ ಬೇಡಾ ಅಂದ್ರು ನನ್ನ ಈ ಕರ್ಣಗಳಿಗೆ ಅವನ ಪೋಮ್ ಪೋಮ್ ಶಬ್ದ ಕೇಳ್ಸ್ತಾ ಇತ್ತು.
ನಂಗೆ ಈಗ ಬಸ್ ಅವನ ಮೇಲೆ ಕೋಪ ಬಂತು.. ಬೇಗ ಹೋಗ್ತಾನೆ ಇಲ್ಲ.. ಡಬ್ಬ … ನಾನ್ ಹಂಗೂ overtake ಮಾಡಿಬಿಡ್ಲಾ ಅಂತ ಕೂಡ ಯೋಚನೆ ಬಂತು.. ಆದ್ರೆ ಮನಸಲ್ಲೇ.. ಎಲ್ಲ possibilities ಗೆ probability ಹಾಕಿ calculate ಮಾಡಿ.. ಅದು ” MISSION IMPOSSIBLE ” ಅಂತ ಸುಮ್ಮನಾದೆ .. ಆದ್ರೆ omni ಭೂಪ ಸುಮ್ನಾಗ್ಲಿಲ್ಲ.. ಒಂದೇ ಸಮ.. ಅದೇ ರಾಗ ಅದೇ ಹಾಡು.. “ಪೋಮ್ ಪೋಮ್ ” ಅಂತ.
ನಾನ್ ಅವನಿಗೆ ಜಾಗ ಬಿಟ್ಟರೂ ಒಂದು ಪಕ್ಷದಲ್ಲಿ.. ಅವ್ನು ಬಸ್ ಗಿಂತ ಮುಂದೆ ಹೋಗೋಕೆ ಆಗ್ತಿರ್ಲಿಲ್ಲ.. ಆದ್ರೂ ಅವನು ತನ್ನದೇ ಲೋಕದಲ್ಲಿ ಕರ್ಕಶವಾಗಿ horn ಮಾಡ್ತಾನೇ ಇದ್ದ.. ಮಾಡ್ತಾನೇ ಇದ್ದ.. ಮಾಡ್ತಾನೇ ಇದ್ದ.. ಇದು ಎಷ್ಟು irritate ಮಾಡ್ತು ನನ್ನ ಅಂದ್ರೆ.. ಹೇಳಕ್ ಆಗಲ್ಲ.. ಕೊನೆಗೆ ಇವನಿಗೆ ಬುದ್ಧಿ ಕಲಿಸ್ಬೇಕು ಅನ್ಸ್ತು. . ಏನಾದ್ರೂ ಮಾಡಿ ಬೈದು ಹೋಗೋಣ ಅನ್ಸ್ತು.. ಗಾಡಿ ನಿಧಾನಕ್ಕೆ ಸೈಡ್ ಗೆ ಹಾಕಿದೆ..ಅವ್ನು ಸಿಕ್ಕಿದ್ದೇ chance ನನ್ನ ಮುಂದೆ ಹೋದ.. ಈಗ ನಾನು ಅವನಿಗೆ ರೇಗಿಸೋಕೆ horn ಮಾಡೋಕೆ ಶುರು ಮಾಡಿದೆ.. ಅವನ tune ಅಲ್ಲೇ.. “ಪೋಮ್ ಪೋಮ್” ಅಂತ..
ಇಬ್ಬರೂ ಹೀಗೆ “ಪೋಮ್ ಪೋಮ್ ” ಅಂತ ಒಬ್ಬರನ್ನೊಬ್ಬರು irritate ಮಾಡ್ತಾ ಇದ್ದಾಗ.. ಅಂತೂ ಕ್ಲೈಮಾಕ್ಸ್ ತರ ಹೆಸರಘಟ್ಟ ರೋಡ್ ಗು ಕೊನೆ ಆಯಿತು.. ಬಸ್ ಅವ್ನು left ಹೋದ್ರೆ.. ನಾನು right .. ಈ ಭೂಪ straight .. ಅಂತೂ, ಐದು ನಿಮಿಷದಲ್ಲಿ ಐನೂರು ಸಲ ಇಬ್ಬರು horn ಮಾಡಿ sound pollution ಮಾಡಿದ್ದಂತೂ ನಿಜ.
ಮನೆಗೆ ಬಂದು.. ಉಸ್ಸಪ್ಪ.. ಅಂತ ಅಮ್ಮನಿಗೆ ನಡೆದ ಎಲ್ಲ ಕಥೆ ಒಂದೇ ಉಸಿರಲ್ಲಿ ಹೇಳ್ದೆ.. ಅಮ್ಮ ಅದಿಕ್ಕೆ ನಗ್ತಾ.. “ನಿಂಗ್ ಏನ್ ಲಾಭ ಆಯ್ತು ಅವನಿಗೆ irritate ಮಾಡಿ ?” ಅಂದ್ರು.. ಹೌದಲ್ವಾ.. ಅಂತ ಅನ್ಸ್ತು, ಆದ್ರೆ ಅದನ್ನ ತೋರ್ಸಕೊಳ್ದೆ..”ಮತ್ತೆ.. ಅವ್ನ್ ಮಾತ್ರ ಮಾಡ್ಬೇಕಾ.. ನಾನ್ ಸುಮ್ನೆ ಇರ್ಬೇಕಾ? ಹೋಗಮ್ಮ.. ನಾವ್ ಬಿಟ್ಟು ಬಿಡೋಕೆ ಆಗತ್ತಾ? ಅವಂಗೂ ಗೊತ್ತಾಗ್ಲಿ irritation ಹೆಂಗ್ ಆಗತ್ತೆ ಅಂತ ” ಅಂದೆ. ಅದಿಕ್ಕೆ ಅಮ್ಮ..”ಇನ್ನು ಚಿಕ್ಕ ಮಗು ತರ ಯೋಚ್ನೆ ಮಾಡೋದ್ ಬಿಟ್ಟಿಲ್ಲ ನೀನು.. ಅವ್ನ್ ಮಾಡಿದ್ರೆ, ಅದು ಅವನ ಕರ್ಮ..ನೀನು ಅದನ್ನೇ ಮಾಡಿದ್ರೆ.. ಏನ್ difference ? ನೀನು horn ಮಾಡಿದ್ದುಅವನಿಗೆ ಒಂದ್ matter ಕೂಡ ಆಗಿರಲ್ಲ.. ಸಿಗ್ನಲ್ ಅಲ್ಲಿ ಎಷ್ಟೊಂದ್ ಸಲ ನೋಡಿಲ್ವಾ.. ರೆಡ್ ಸಿಗ್ನಲ್ ಇದ್ರೂ ಕೂಡ ಜನ ಹಾರ್ನ್ ಮಾಡ್ತಾ ಇರ್ತಾರೆ. noise pollution ಬಗ್ಗೆ think ಉ ಮಾಡಲ್ಲ..
ಇದ್ಯೆಲ್ಲ ತುಂಬಾ ಮಾಮೂಲಿ.. ಲೈಫ್ ಅಲ್ಲಿ ಕೂಡ ಇದೇ ತರ ಸಾವಿರ ಜನ ಇರ್ತಾರೆ.. ಸುಮ್ನೆ ಬೈಕೊಂಡು ಓಡಾಡೋ ಜನ ಇರ್ತಾರೆ.. ಹಾಗಂತ ನೀನು ಬೈಕೊಂಡು ಓಡಾಡಿದ್ರೆ? ಸರಿ ಇರಲ್ಲ ಅಲ್ವ? ನೀನು ‘ಅವರ’ ತರ ಅಲ್ಲ ಅಲ್ವ?
first of all .. ನೀನು ತಲೆ ಕೆಡಿಸ್ಕೊಬಾರ್ದು ಇದಕ್ಕೆಲ್ಲ.. ಹೆಚ್ಚು ಅಂದ್ರೆ ಐದು ನಿಮಿಷ ನೀವು ಒಟ್ಟಿಗೆ ಇದ್ದಿದ್ದು.. ಅಷ್ಟ್ರಲ್ಲಿ ಇಷ್ಟೆಲ್ಲಾ ಬೇಕಾ? ಕೊನೆಗೆ ಎಲ್ಲ ಅವರವರ ದಾರಿ ನೋಡ್ಕೋ ಬೇಕು.. ಲೈಫ್ ಉ ಇಷ್ಟೇನೆ.. ಆ ಬಸ್ ಡ್ರೈವರ್ ನೋಡು.. ಹೆಂಗ್ ಆರಾಮಾಗ್ ತಲೆ ನೇ ಕೆಡಿಸಿಕೊಳ್ಳದೆ ಇದ್ದ.. ಹಾಗ್ ಇರ್ಬೇಕು ತಿಥಿ ಫಿಲಂ ಅಜ್ಜ ತರ.. silly matter ಗಳಿಗೆ react ಮಾಡ್ಬಾರ್ದು.. ಎಲ್ಲದಕ್ಕೂ”I wil give it back. I will show them the taste of their own medicine” ಅಂತ ಹಾರಾಡಬಾರ್ದು.. ಇದ್ಯೆಲ್ಲ experience ಆಗ್ತಾ ನಿಂಗೆ ಗೊತ್ತಾಗತ್ತೆ.. ” ಅಂತ ಅಮ್ಮ ಅಂದಾಗ .. ಹೌದಲ್ವಾ.. ಅಂತ ಅನ್ಸಿದ್ದು ನಿಜ.. ಏನೋ ಬಹಳ ‘ಪೋಮ್ ಪೋಮ್’ ಮಾಡಿ ಸಾಧನೆ ಮಾಡಿದೀನಿ ಅನ್ಸಿದೆಲ್ಲ ಡಮಾರ್ ಆಯ್ತು.. ಜೀವನದಲ್ಲಿ ನಂಗೆ ಇನ್ನು ಯಾವಾಗಪ್ಪ ಇದ್ಯೆಲ್ಲ ಅರ್ಥ ಆಗತ್ತೆ.. ದೇವ್ರೇ..ಕಾಪಾಡಪ್ಪ ಅನ್ಕೊಂಡು ಅಮ್ಮ ಮಾಡಿದ್ದ ಬಿಸಿ ಬಿಸಿ ರೊಟ್ಟಿ ತಿನ್ನೋಕೆ ಹೋದೆ.