1974

ಹಾಗಂದ್ರೇನು ?

ನಮ್ಮ ತಾತ,ಮುತ್ತಾತರ ಕಾಲದಲ್ಲಿ ‘ಪತ್ರ’ದ್ದೆ ರಾಜ್ಯಭಾರ. ಸಿಹಿ-ಕಹಿ ಏನೇ ಇದ್ರು ಎಲ್ಲವನ್ನು ಕಾಗದ ಬರೆದು ಹಂಚಿಕೊಳ್ಳಬೇಕಿತ್ತು. ಮದುವೆಯಾಗಿ ಗಂಡನ ಮನೆಗೆ ಹೋದ ಮಗಳು ಯಾವಾಗ ಕಾಗದ ಬರೆಯುತ್ತಾಳೋ ಎಂಬ ಚಿಂತೆ ತಾಯಿಗೆ, ಪಟ್ಟಣಕ್ಕೆ ಓದಲು ಹೋದ ಮಗ ತನ್ನ ಓದಿನ ಕುರಿತು ಯಾವಾಗ ಕಾಗದ ಬರೆಯುತ್ತಾನೋ ಎಂಬ ಚಿಂತೆ ತಂದೆಗೆ. ಆಗಾಗ ಪರಸ್ಪರ ಭೇಟಿಯಾಗಲು ಸಾಧ್ಯವಾಗದ ಗೆಳೆಯರಿಗೆ ವಾರಕ್ಕೊಮ್ಮೆಯಾದರು ಪತ್ರ ಬರೆದು ಆರೋಗ್ಯದ ಕುರಿತು ವಿಚಾರಿಸುವ ಹಂಬಲ.
ಒಟ್ಟಿನಲ್ಲಿ ಬರೆಯುವುದಕ್ಕೆ ಒಂದು ಕಾರಣ, ಅದನ್ನು ಕಳುಹಿಸುವುದಕ್ಕೆ ಒಂದು ವಿಳಾಸ ಇದ್ರೆ ಸಾಕು ಎನ್ನುವಂತಿತ್ತು ಆ ಕಾಲ. ‘ಟ್ರಿನ್ ಟ್ರಿನ್’ ಅಂತ ಸೈಕಲ್ ಶಬ್ದ ಬಂದರೆ ಸಾಕು ‘ನಮ್ಮ ಮನೆಗೆ ಕಾಗದ ಬಂದಿರಬಹುದು’ ಎಂದು ಬಾಗಿಲು ತೆರೆದು ನೋಡುತ್ತಿದ್ದವರು ತುಂಬಾ ಜನ. ಸೈಕಲ್ ಹಿಂದೆ ಸಾಲು-ಸಾಲು ಚಿಕ್ಕ ಮಕ್ಕಳು. Postman ಅಂಕಲ್ ಗಂತು ರಾಜ ಮರ್ಯಾದೆ, ವಿಶ್ರಾಂತಿಗಾಗಿ ಜಾಗ,ಊಟ,ಮಜ್ಜಿಗೆ, ಕಾಫ಼ಿ,ಟೀಗಾಗಿ ಆತ ಪರದಾಡುವ ಗೋಜೆ ಇರಲಿಲ್ಲ.
ಒಂದಾನೊಂದು ಕಾಲದಲ್ಲಿ ರಾಜ,ರಾಣಿ ತಮ್ಮ ಪ್ರೇಮ ನಿವೇದನೆಯನ್ನು ಒಂದು ಪತ್ರದಲ್ಲಿ ಬರೆದು ಅದನ್ನು ಪಾರಿವಾಳದ ಕಾಲಿಗೆ ಕಟ್ಟಿ ಹಾರಿಬಿಡುತ್ತಿದ್ದರಂತೆ.
ಕೇಳೋದಕ್ಕೆ ಚಂದ ಅಲ್ವ ಈ ರೀತಿ ಪ್ರೇಮ ಕಥೆನಾ? ಪತ್ರ ಇಡೋಕ್ಕೆ ಅಂತಾನೆ ಒಂದು suitcase ಇರ್ತಾ ಇತ್ತೋ ಏನೋ ?
ಈಗ ಕಾಲ ಬದಲಾಗಿದೆ, ನಾವೆಲ್ಲ modern technologyಯ ಮಕ್ಕಳು. ‘ತೀರ್ಥರೂಪ ತಂದೆ’, ‘ಮಾತೃಶ್ರೀ’ ಹೋಗಿ ‘hi dad ,hi mom’ ಆಗಿದೆ. ‘ಹೇಗಿದ್ದೀಯಾ’? ಅಂತ ಕೇಳೋದಕ್ಕೆ ‘how are you’? ಅಂತ ಇತ್ತು ಈಗ ಅದು ‘hw ru’ ಆಗಿದೆ. ‘ಪ್ರೀತಿಯ ಗೆಳೆಯನಿಗೆ’ ಅನ್ನೊ ಪದ ‘hi dude’ಆಗಿ ಎಷ್ಟೋ ದಿನ ಆಗಿದೆ.
ಮಕ್ಕಳಿಗೆ ಬರೆಯುವ speedಗಿಂತ typing speed ಜಾಸ್ತಿ ಆಗಿದೆ. ಮೊದಲೆಲ್ಲ ಮನೆಯಲ್ಲಿ ಹುಟ್ಟಿದ ಹಬ್ಬ,ಹೊಸ ವರ್ಷ ಬಂತು ಅಂದ್ರೆ ‘ಯಾರು ಈ ವರ್ಷ greetings ಕಳುಹಿಸಬಹುದು’ ಅಂತ ಕಾಯುತ್ತಿದ್ದೋ, ಈಗ mobileನಲ್ಲಿ HBD(happy birthday)ಅಂತ ಬಂದ್ರೆ ಅದೇ ಪುಣ್ಯ.
ಪತ್ರ ಬರೆಯೋಕ್ಕೆ ಬರುತ್ತಾ ಅಂತ ಯಾರೋ ಹಿರಿಯರು ಕೇಳಿದ್ರೇ ? ಹು,ಬರುತ್ತೆ 10th std ಮತ್ತು 2nd PUC ಪರೀಕ್ಷೆಯಲ್ಲಿ 5 marks ಗೆ ಪತ್ರ ಬರೆಯಿರಿ ಅಂತ ಒಂದು ಪ್ರಶ್ನೆ ಇದೆ ಅಲ್ಲಿ ಪತ್ರ ಬರಿಯಬೇಕು ಎಂದು ಯಾರೋ ಯುವಕ ಉತ್ತರಿಸಿದ.
time waste ಮಾಡಿ ಯಾಕೆ ಪತ್ರ ಬರಿಯಬೇಕು ,mobile ಇದ್ಯಲ್ಲ message ಮಾಡು ಎಂಬುದು ಈಗಿನ ಯುವಜನರ ಅಭಿಪ್ರಾಯ.
ಮುಂದಿನ ಯುವ ಪೀಳಿಗೆ ‘ಪತ್ರ ಅಂದ್ರೆ ಏನು ?
ಕಾಗದ ಅಂದ್ರೆ ಏನು? Postmanಅಂದ್ರೆ ಯಾರು ‘? ಅಂತ ಕೇಳಿದ್ರು ಆಶ್ಚರ್ಯ ಏನಿಲ್ಲ. ಕೆಂಪು ಬಣ್ಣದ ಪೊಸ್ಟ್ ಬಾಕ್ಸ್ ಅಂತು ನೆನಪೇ ಇರೋಲ್ಲ ಬಿಡಿ.
ಎಲ್ಲವನ್ನು ಮ್ಯುಜಿಯಮ್ ನಲ್ಲಿ ಇಟ್ಟು ಮಕ್ಕಳಿಗೆ ತೂರಿಸುವ ದಿನಗಳು ದೂರವಿಲ್ಲ……
ಯಾಕಂದ್ರೆ ನಾವೆಲ್ಲ mobileನಲ್ಲಿ ಪತ್ರ ಬರೆಯುವ modern ಜನರಲ್ಲವೆ ?…..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..