1073

ವ್ಯಾಪಾರದ ಮಹಿಮೆ

ಪ್ರತಿದಿನವೂ ಮನೆಯಿಂದ ಆಫ಼ೀಸಿಗೆ ಹೋಗುತ್ತಿದ್ದ ನನಗೆ ಕಂಡು ಬಂದ ಒಂದು ‍‍‍‍‍‍‍ಸಂಗತಿ ‘ದಿನವು ಸೂರ್ಯೊದಯದ ಮೊದಲೇ ಕೆಲಸೆಕ್ಕೆಂದು ತೆರಳುವ ವ್ಯಕ್ತಿಗಳು’
ಯಾರಿವರು ?
ಹೂ,ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು.

ಕೆಲವರು ತಳ್ಳುವ ಗಾಡಿಯಲ್ಲಿ ಹೂ,ತರಕಾರಿ ಮತ್ತು ಹಣ್ಣುಗಳೊಂದಿಗೆ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುವುದಾದರೆ ಇನ್ನು ಕೆಲವರು ಬೀದಿ-ಬೀದಿ ತಿರುಗಿ ವ್ಯಾಪಾರ ಮಾಡುತ್ತಾರೆ. ಇವರಿಗೆ ವ್ಯಾಪಾರಕ್ಕೆಂದು ಯಾವುದೇ ಒಂದು ನಿರ್ದಿಷ್ಟ ಸ್ಥಳವಿಲ್ಲ. ಪ್ರತಿದಿನವೂ ಹೊಸ ದಿನ ,ಹೊಸ ವ್ಯಾಪಾರ. ಇತ್ತೀಚಿಗೆ ಹೆಚ್ಚಾಗಿರುವ ಸೂಪರ್ ಮಾರ್ಕೆಟ್ ಗಳಿಂದ ವ್ಯಾಪಾರ ಕುಂಟಿತವಾದರು ದೃತಿಗೆಡದೆ ತಮ್ಮ ಪ್ರತಿದಿನದ ಕೆಲಸ ಮುಗಿಸಿ ಮನೆಗೆ ತೆರಳುತ್ತಾರೆ. ಇವರಿಗೆ ಲಾಭದ ಮೇಲಿನ ಅಪೇಕ್ಷೆಗಿಂತ ಪ್ರತಿದಿನದ ಖರ್ಚಿಗೆ ಸಂಪಾದನೆಯಾದರೆ ಸಾಕು ಎನ್ನುವ ಆಸೆ. ಬಿಸಿಲು-ಮಳೆ ಎನ್ನದೆ ದುಡಿಯುವ ಇವರ ಹಿಂದೆ ತಂದೆ-ತಾಯಿ,ಹೆಂಡತಿ, ಮಕ್ಕಳೆನ್ನುವ ದೊಡ್ದ ಸಂಸಾರದ ಜವಾಬ್ದಾರಿ. ಕೆಲವೊಮ್ಮೆ ಹಸುಗೂಸಿನೊಂದಿಗೆ ಹೆಣ್ಣು ಮಗಳೊಬ್ಬಳು ಹೂ,ತರಕಾರಿ ಮಾರುವುದನ್ನು ಕಂಡಿರುತ್ತೇವೆ. ಇವರಿಗೆ ತಮ್ಮ ಮಕ್ಕಳಿಗೆ ಹೊಟ್ಟೆ ತುಂಬಿಸುವುದೇ ಮುಖ್ಯ ಗುರಿ. ತಮ್ಮ ವ್ಯಾಪಾರವೇ ಪ್ರಪಂಚ.

ಇಷ್ಟು ಕಷ್ಟದಿಂದ ಜೀವನದ ಬಂಡಿಯನ್ನು ತೂಗಿಸುವವರಿಗೆ ಬುದ್ದಿ ಜೀವಿಗಳು ಮಾಡುವಂತ ಕೆಲಸ 1-2 ರುಪಾಯಿಗೆ ರಿಯಾಯಿತಿ ಕೇಳುವುದು.
ಮುಗಿಲೆತ್ತರದ ಕಟ್ಟಡಗಳಲ್ಲಿ ಶಾಪಿಂಗ್ ಮಾಡುವವರು fixed price ಎನ್ನುವಂತ tagline ಇದ್ದರು ತಲೆಕೆಡಿಸಿಕೊಳ್ಳದೆ,ಒಂದರ ಬೆಲೆಗೆ ದುಪ್ಪಟ್ಟಾದರು ಕೊಟ್ಟು ವಸ್ತುಗಳನ್ನು ಕೊಳ್ಳುವ ಜನರು ರಸ್ತೆಬದಿಯ ವ್ಯಾಪಾರಿಗಳಲ್ಲಿ ರಿಯಾಯಿತಿಗಾಗಿ ಹಂಬಲಿಸುತ್ತಾರೆ .

ಮನುಷ್ಯನ ಸ್ವಭಾವವೇ ಹೀಗಾ ? ಸಾವಿರಾರು ರುಪಾಯಿ ಅವಶ್ಯಕತೆಯಿಲ್ಲದೆ ವ್ಯರ್ಥವಾಗಿ ಪೋಲಾದರು ಪರವಾಗಿಲ್ಲ ಆದರೆ ರಸ್ತೆಬದಿ ವ್ಯಾಪಾರಿಗಳ ಬಳಿ 1-2 ರುಪಾಯಿ ವಾಪಸ್ ಪಡೆಯುವವರೆಗು ಸಮಾಧಾನವಿರೋಲ್ಲ.ಇವರು ದುಡಿಯುವುದು ಜೀವನ ನಿರ್ವಹಣೆಗಾಗಿ ಎಂದು ಅರ್ಥವಾಗುವುದು ಯಾವಾಗ ?
ಇವರು ತರುವಂತ ಒಂದು ತುತ್ತಿನ ಊಟಕ್ಕಾಗಿ ಕಾಯುವವರಿದ್ದಾರೆ, ಇದನ್ನು ಅರಿತು ನಡೆಯುವ ದಿನ ಯಾವುದು ?
‘ಬುದ್ದಿ ಜೀವಿಗಳ ಹಣ ಉಳಿಸುವಿಕೆಯ ಬುದ್ದಿವಂತ ಮಾರ್ಗ’.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..