627

ನವೆಂಬರ್ 16 ರಿಂದ ಸ್ಪೋರ್ಟ್ಸ್ ಚಾನೆಲ್ ಕನ್ನಡದಲ್ಲಿ ಲಭ್ಯ

ಅಗ್ರಗಣ್ಯ TV ಚಾನೆಲ್ ಕಂಪನಿ STAR , ಪ್ರಾದೇಶಿಕ ಭಾಷೆಯಲ್ಲಿ ಚಾನೆಲ್ ಶುರು ಮಾಡುವ ಪ್ರಕ್ರೀಯೆಯಲ್ಲಿ ತಮಿಳು ಹಾಗು ಹಿಂದಿಯಲ್ಲಿ ಯಶಕಂಡ ನಂತರ ಕನ್ನಡದಲ್ಲೂ ಸ್ಪೋರ್ಟ್ಸ್ ಚಾನೆಲ್ ಅನ್ನು ಶುರು ಮಾಡಲಿದೆ. ಹಿಂದಿಯಲ್ಲಿ ಸಿಗುತ್ತಿದ್ದ ಮ್ಯೂಸಿಕ್ ಚಾನೆಲ್ V ಯನ್ನು ಸಂಪೂರ್ಣವಾಗಿ ಕನ್ನಡ ಸ್ಪೋರ್ಟ್ಸ್ ಚಾನೆಲ್ ಮಾಡುವತ್ತ company ನಿರ್ಧಾರ ಮಾಡಿದೆ .Star Sports 1 ಕನ್ನಡ ಎಂಬ ಹೊಸ ಹೆಸರಿನೊಂದಿಗೆ ನವೆಂಬರ್ 16 ರಂದು ಪ್ರಸಾರ ಕಾರ್ಯ ಶುರು ಮಾಡಲಿದೆ ,ಇದರೊಂದಿಗೆ ಇನ್ನು ಮುಂದೆ ಹಿಂದಿಯಲ್ಲಿ ಸಿಗುತ್ತಿದ್ದ ವಿ ಮ್ಯೂಸಿಕ್ ಚಾನೆಲ್ ಅಂದಿನಿಂದ ಪ್ರಸಾರವನ್ನು ಸ್ಥಗಿತಗೊಳಿಸಲಿದೆ.ಸ್ಟಾರ್ ಕಂಪನಿ 2013 ರಲ್ಲಿ ಮೊದಲ ಪ್ರಾದೇಶಿಕ ಚಾನೆಲ್ ಅನ್ನು ಹಿಂದಿಯಲ್ಲಿ ತೆರೆಯಿತು . ಇದಾದ ನಂತ ತಮಿಳಿನಲ್ಲಿಯೂ ಸ್ಪೋರ್ಟ್ಸ್ ಚಾನೆಲ್ ಶುರು ಮಾಡಿ ಬಹಳ ಯಶಸ್ಸು ಕಂಡಿತು . ಇದಾದ ನಂತರ ಈಗ ಕನ್ನಡಲ್ಲಿ ಸ್ಪೋರ್ಟ್ಸ್ ಚಾನೆಲ್ ಶುರು ಮಾಡುವ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ತನ್ನದೇ ಛಾಪು ಮೂಡಿಸಲು ಸನ್ನದ್ಧವಾಗಿದೆ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..