3325

ಕುಂದಾಪುರದವರು ಈ 5 ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸಿ ಸುಸ್ತಾಗಿರ್ತಾರೆ

1 ನಿಮ್ದು ಸೌತ್ ಕೆನರಾ ಆಲ್ವಾ ? ತುಳು ಮಾತಾಡೋದು ಅಲ್ವಾ ?

ನಮ್ಗ್ ತುಳು ಭಾಷಿಲ್ ಬಪ್ಪುದ್ ಎರಡೇ ಶಬ್ದ “ಒಣ ಸಾಂಡ “..ಅದೂ ನೆಟ್ಟಗ್ ಹೇಳುಕ್ ಬತ್ತಿಲ್ಲ 🙁 😀
►ಕುಂದಾಪುರ ಉಡುಪಿ ಜಿಲ್ಲೆಗೆ ಸೇರಿದ್ದರೂ ಮಾತೃ ಭಾಷೆ ಕುಂದ ಕನ್ನಡ .ತುಳುನಾಡಿಗೆ ಸೇರಿದ ಹಲವಾರು ಕುರುಹುಗಳು ಕುಂದಾಪುರದ ಆಸುಪಾಸುಗಳಲ್ಲಿ ಇಂದಿಗೂ ಕಾಣಬಹುದು . ಆದರೂ  ಕೆಲವೊಬ್ಬರಿಗೆ ಮಾತ್ರ ತುಳು ಭಾಷೆ ಬರುತ್ತೆ .. ಅದೂ ಕೂಡ ಅತೀ ವಿರಳ . ಕುಂದ ಕನ್ನಡ ಕನ್ನಡದ ಒಂದು ಆಡುಭಾಷೆ . ಹೆಚ್ಚಿನ ಶಬ್ಧಗಳು ಸಂಕ್ಷಿಪ್ತವಾಗಿ ಇರುತ್ತವೆ .ಹಳೆಗನ್ನಡದ ಕೆಲವು ಶಬ್ಧಗಳು ಕುಂದ ಕನ್ನಡದಲ್ಲಿವೆ . ಉದಾಹರಣೆಗೆ ಬಪ್ಪ -ಬರುವ . ಇದೆ ರೀತಿಯಲ್ಲಿ ಹೋಗುತ್ತೇನೆ ಅನ್ನುವುದುದಕ್ಕೆ ಹೊಯ್ಕ್ ಎಂದು ಸಂಕ್ಷಿಪ್ತವಾಗಿ ಹೇಳುತ್ತಾರೆ


2.ಸಮುದ್ರ ಮನೆ ಪಕ್ಕಾನೇ ಇರುತ್ತೆ ಅಲ್ವಾ .. ಆರಾಮ್ ಆಗಿ ಫ್ರೆಶ್ ಮೀನ್ ಹಿಡ್ಕೊಂಡು ಒಳ್ಳೆ ಊಟ ಮಾಡಬಹುದು ?

ಹೌದೌದು ..ಮನಿ ಬಾಗ್ಲೆಗೆ ಕೂಕಂಡ್ ಆಚೀಗ್ ಸಮುದ್ರಾಕ್ ಕೈ ಹಾಯ್ ಮೀನ್ ಹಿಡುದ್ ..ಗುಳಕ್ಕ ನುಂಗುದ್  😛 😀
►ಕರಾವಳಿ ಪ್ರದೇಶ ಹೌದು ..ಆದರೂ ಮಲೆನಾಡಿಗೆ ಸ್ವಲ್ಪ ಹತ್ತಿರದಲ್ಲೇ ಇದೆ .. ಸಮುದ್ರ ಮನೆ ಪಕ್ಕದಲ್ಲಿ ಎಲ್ಲ ಕಡೆನೂ ಇರೋಲ್ಲ ..ಹಾಗೆ ಮನೆ ಸಮುದ್ರದ ಪಕ್ಕ ಇದ್ದ ತಕ್ಷಣ ಎಲ್ಲರೂ ಮೀನ್ ಹಿಡಿಯೋಕೆ ಹೋಗಲ್ಲ ..

3.coastal ಏರಿಯಾದವನು ನೀನು ..ಮೀನ್ ತಿನ್ನೋಲ್ಲ ಅಂತೀಯಾ ?

ಹವ್ದ್ .. ನಿಮ್ ಜ್ವಾಗಳಕ್ ಇಷ್ಟ್ !! ಮೀನ್ ಎಲ್ಲರೂ ತಿಂಬುದಿಲ್ಲೆ ಮರ್ರೆ
►ಕುಂದಾಪುರದವರು ಎಂದಾಕ್ಷಣ ಎಲ್ಲರೂ ಮೀನನ್ನೇ ತಿಂದು ಬದುಕುತ್ತಾರೆ ಎಂಬ ಕಲ್ಪನೆ ತಪ್ಪು . ಕೆಲವರಿಗೆ ಮೀನಿನ ವಾಸನೆ ನೋಡಿದರೂ ಆಗುವುದಿಲ್ಲ ..


4.ನಿಮ್ ಕಡೆ ಸಕತ್ ಒಳ್ಳೊಳ್ಳೆ figures ಇರ್ತಾರೆ ಅಲ್ವಾ ?

ನಮ್ ಕಣ್ಣಿಗ್ ಕಿಚ್ ಹಿಡುಕ್ ಒಂದೂ ಹಾಂಗಿನವ್ ಕಾಂಬುಕ್ ಸಿಕ್ತಿಲ್ಲೆ ಮಾರ್ರೆ 😛 😀
►jokes apart.. ಚೆನ್ನಾಗಿರೋ ಹುಡ್ಗೀರಿಗೆ ಬರ ಏನಿಲ್ಲ ..ಆದ್ರೂ ಎಲ್ಲ ಹುಡ್ಗೀರು ಚೆನ್ನಾಗಿರ್ತಾರೆ ಅನ್ನೋ ಓವರ್ ಕಾನ್ಫಿಡೆನ್ಸ್ ಬೇಡ ( ಬೈಕೋಬೇಡಿ ..ಎಲ್ಲರೂ ಚೆನ್ನಾಗಿರೋರೆ 😛 )


5.ನೀವು coastal ಕಡೆಯವರು ಅಲ್ವಾ ..ನಿಮ್ಮ ಕನ್ನಡ ಉಚ್ಚಾರಣೆ “ನಾವು ಅಲ್ಲಿಗೆ ಹೋಗಲಿಕ್ಕುಂಟು ..ಇಲ್ಲಿಗೆ ಬರಲಿಕ್ಕುಂಟು ” ಅನ್ನೋ ರೀತಿ ಯಾಕಿಲ್ಲ ?

ನಮ್ಗೆ ಎಲ್ಲೆಲ್ ಹ್ಯಾಂಗ್ ಹ್ಯಾಂಗ್ ಇರ್ಕ್ ಹಾಂಗೆ ಇಪ್ಪುಕ್ ಗೊತ್ತಿತ್ ..ಅದ್ ನಮ್ ದೊಡ್ದಸ್ತಿಗಿ .. ನೀವೇ ಹೇಳ್ದಾಗೆ ನಮ್ ತಲಿ ಚುರ್ಕ್ ಅಲ್ದಾ
►ಕುಂದಾಪುರದವರು ಈ ವಿಚಾರದಲ್ಲಿ ಎಲ್ಲರಿಗಿಂತಲೂ ಒಂದು ಕೈ ಮಿಗಿಲು ಅನ್ನಬಹುದು .. ಅವರು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿಯ ಭಾಷೆಯನ್ನು ಕಲಿತು ಅದೇ ಪ್ರದೇಶದ ಉಚ್ಚಾರಣೆ ಮೂಲಕ ಮಾತನಾಡಬಲ್ಲುರು ..ಇದನ್ನು ನೀವು ಸರಿಯಾಗಿ ಗಮನಿಸಿ

ನಿಮಗೆ ಇದೇ ತರಹದ ಇನ್ನಷ್ಟು ಪ್ರಶ್ನೆಗಳ ಸುರಿಮಳೆ ಬಿದ್ದಿದ್ದರೆ ಕಾಮೆಂಟ್ Box ಅಲ್ಲಿ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..