1484

TEACHER’S DAY

ತುಂಬಾ ದಿನಗಳ ನಂತರ ನಾನು ಬರಿಲೇ ಬೇಕು ಅಂತ ಕೂತ ಕಾರಣ.. “TEACHER’S DAY” ..

ಬರೀಬೇಕು ಅಂತ ಕೂತಾಗ, ಸ್ವಲ್ಪ ತಲೆ ಬಿಸಿಯಾಗಿದ್ದು ನಿಜ.. ಯಾಕಂದ್ರೆ, ಮನಸಲ್ಲಿರೋದನ್ನ ಇದ್ದ ಹಾಗೇ ಫಿಲ್ಟರ್ ಇಲ್ಲದೇ ಬರೆಯೋ ನಾನು, ಈ ವಿಷಯದಲ್ಲಿ ಹಾಗೆ ಹೇಳೋಕೆ ಸ್ವಲ್ಪ ಕಷ್ಟ ಅನ್ಸ್ತು.. ಆದರೂ ತಕ್ಕ ಮಟ್ಟಿಗೆ ಮನಸಲ್ಲಿರೋದನ್ನ ಹೇಳೋ ಪ್ರಯತ್ನ ಮಾಡಿದೀನಿ . . .

ನಾನು ಓದಿದ್ದು JNNCE, ಶಿವಮೊಗ್ಗ ಅಲ್ಲಿ.. ಸ್ವರ್ಗಕ್ಕೆ ಇನ್ನೊಂದ್ ಹೆಸರೇ JNNCE.. ಇವತ್ತಿಗೂ ನಮ್ ಕಾಲೇಜ್ ದಿನಗಳನ್ನ , ಸ್ನೇಹಿತರನ್ನ, lecturers na . . ಆಗಾಗ ನೆನಪಿಸಿಕೊತಾ ಇರ್ತೀನಿ.. combined studies ಮಾಡಿ ಪಾಸ್ ಆಗಿರೋ ಗ್ಯಾಂಗ್ ನಮ್ದು.. ನಮ್ ಮನೇಲಿ exam time Andre saaku, ಸಿಕ್ಕಾಪಟ್ಟೆ ಜನ . . ಹಾಸ್ಟೆಲ್ ಗ್ಯಾಂಗ್, ಭದ್ರಾವತಿ ಗ್ಯಾಂಗ್.. ಶಿವಮೊಗ್ಗ ಗ್ಯಾಂಗ್.. ಎಲ್ಲಾ ನಮ್ ಮನೇಲೇ ಹಾಜರ್.. ಬೆಳಿಗ್ಗೆ ತಿಂಡಿ ಮಾಡಿಕೊಂಡು ಎಲ್ಲರೂ ನಮ್ ಮನೆಗೆ ಬಂದರೆ, ಇನ್ನು ಸಂಜೆ 6 ಗಂಟೆ ಸಮಯಕ್ಕೇ ಮನೆಗೆ ಹೋಗ್ತಿದ್ರು.. ಮನೆಗೆ ಹೋಗದೇ

ಎಷ್ಟೋಜನ ನಮ್ಮ ಮನೇಲೇ ಉಳಿದಿರೋ ದಿನಗಳೂ ಇದೆ.. ಅಮ್ಮ ನಮ್ ಗ್ಯಾಂಗ್ಗೆ ದಿನಾ ಒಂದು ದೊಡ್ಡ ಪಾತ್ರೆಲಿ ಸಾರು,ಇಲ್ಲಾ ಹುಳಿ ಮಾಡಿಟ್ಟು ಹೋಗೋರು.. ನಾವೆಲ್ಲಾ ಅನ್ನಕ್ಕೆ ಇಟ್ಕೊಂಡು ಚೆನ್ನಾಗಿ ಹಪ್ಪಳ ಸಂಡಿಗೆ ಕರೆದು.. ಯಾವ್ದಾದ್ರೂ ಸಿನಿಮಾ ನೋಡ್ತಾ ಊಟ ಮಾಡೋದು.. weekend ಬಂದ್ರೆ ನನ್ ಫ್ರೆಂಡ್ಸ್ ಗೆ ಫುಲ್ ಖುಷಿ.. ಯಾಕಂದ್ರೆ, ಅವತ್ತು ನಮ್ ಅಪ್ಪ ಏನಾದ್ರೂ ಹೊಸ ತರ snacks ಮಾಡಿ ಕೊಡೋರು ಎಲ್ಲರ್ಗು…

ನಮ್ ಮನೆಗೆ ಬರೋ ಫ್ರೆಂಡ್ಸ್ ಗೆ ಪಾಠ ಹೇಳ್ಕೊಡ್ಬೇಕಲ್ಲ ಅಂತ ನಾನು ಕ್ಲಾಸ್ ಅಲ್ಲಿ ತುಂಬಾ concentration ಇಂದ ಪಾಠ ಕೇಳ್ತಿದ್ದೆ.. ನೋಟ್ಸ್ ಮಾಡ್ತಿದ್ದೆ . . ಆಮೇಲೆ ಎಲ್ಲರಿಗೂ ಅರ್ಥ ಆಗೋಹಾಗೆ ಹೇಳಿ ಕೊಡ್ತಾ ಇದ್ದೆ.. ನಾನು ಹೇಳಿಕೊಟ್ಟು ಅವರು ಕಲಿತಾಗ, ಏನೋ ಮನಸಲ್ಲಿ ಖುಷಿ.. ತುಂಬಾ ಖುಷಿ.. ಇದನ್ನ ಗಮನಿಸಿದ ನನ್ನ lecturers ನನಗೆ “ನೀನೂ teacher ಆಗು. . ನಿನ್ forte ಅದು” ಅಂತ ಹೇಳ್ತಿದ್ರು.. ನಾನು final year engineering ಗೆ ಬರೋ ಅಷ್ಟರಲ್ಲಿ, ನನಗೇ ಲೆಕ್ಚರರ್ ಆಗ್ಬೇಕು ಅನ್ನೋ ಆಸೆ ಮನಸಲ್ಲಿ ಮನೆ ಮಾಡಿ ಆಗಿತ್ತು.. ಮನೇಲಿ

ಹೇಳಿದಾಗ, ಅಪ್ಪ ಅಮ್ಮ ಇಬ್ಬರೂ ok ಅಂದ್ರು.. ಅಮ್ಮನಿಗೆ ತಾನು teacher ಆಗ್ಬೇಕು ಅಂತ ತುಂಬಾ ಆಸೆ ಇತ್ತಂತೆ.. ಈಗ ತನ್ನ ಮಗಳಾದರೂ ಆಗ್ತಿದಾಳಲ್ಲಾ ಅಂತ ಖುಷಿ.. ಆದರೆ ಅಪ್ಪ ಮಾತ್ರ, placement attend ಮಾಡು.. ಒಂದು ಆಫರ್ ಕೈಅಲ್ಲಿ ಇಟ್ಕೋ.. ಆಮೇಲೆ decide ಮಾಡೋಣ ಅಂತ ಹೇಳಿದ್ರು.. ಸರಿ, HCL ಅಲ್ಲಿ placement u aytu . . ಕೊನೆಗೆ ಅದು ಬೇಡ, ಲೆಕ್ಚರರ್ ಏ ಆಗಬೇಕು ಅಂತ mtech ಸೇರಿದ್ದೂ ಆಯ್ತು..

mtech ಸೇರಿದಾಗ, ಶಿವಮೊಗ್ಗ ಅಲ್ಲಿ ಅರ್ಪಿತಾ ಟ್ರಸ್ಟ್ ಅಲ್ಲಿ ದಿನಾ ಸಂಜೆ ಹೋಗಿ ಮಕ್ಕಳಿಗೆ ಫ್ರೀ ಆಗಿ ಪಾಠ ಹೇಳಿಕೊಡ್ತಾ ಇದ್ವಿ ನಾನು ನನ್ನ cousins ಸ್ವಾತಿ ಮತ್ತು ಸನ್ಮತಿ.. ಆಗಲೂ ಏನೋ ಒಂದು ಖುಷಿ..

ಕೊನೆಗೆ mtech ಮುಗಿಸಿ, ಕೆಲಸಕ್ಕೆ ಸೇರಿದ್ದು ಮಂಗಳೂರಿನಲ್ಲಿ.. ಹೊಸ ಊರು, ಹೊಸ ಜನ.. ಹೊಸ ಭಾಷೆ..ಹೊಸ ಸ್ನೇಹಿತರು.. ಇಷ್ಟವಾದ ಕೆಲ್ಸ ಅಲ್ವಾ ಅಂತ ಸಂಬಳ ಕಡಿಮೆ ಆದ್ರೂ ಸೇರಿದ್ದೆ ಕೆಲಸಕ್ಕೆ.. ಮಕ್ಕಳ ಜೊತೆ ಇರೋದು.. ಪಾಠ ಮಾಡೋದು, cultural activities ಮಾಡಿಸೋದು..

ಎಲ್ಲಾ ಒಂದು ಜೋಶ್! ಜೊತೆ ಇದ್ದ ಸ್ನೇಹಿತರೂ ಕೂಡ ನನ್ ತರಾನೇ.. ಇನ್ನು ಕೇಳಬೇಕಾ !! ಸಖತ್ ಮಜಾ ಇತ್ತು..

Lecturer ಆದ್ರೆ ಬರೀ ಪಾಠ ಮಾಡೋಕೆ ಇರತ್ತೆ ಅಂತ ಅಂದುಕೊಂಡಿದ್ದೆ ನಾನು.. ಆದರೆ, ಆಮೇಲೆ ಗೊತ್ತಾಯ್ತು ಅಸ್ಲಿ ವಿಷಯ.. ದಿನಕ್ಕೆ minimum 4 ಗಂಟೆಗಳ ಕಾಲ ನಿಂತು ಪಾಠ ಮಾಡಬೇಕು, research ಮಾಡಬೇಕು, phd enroll ಆಗ್ಬೇಕು, studentdu complete data ಇಟ್ಕೊಬೇಕು..mentoring ಅಂತ ಮಾಡಿ, ಅವರ ಅಪ್ಪ ಅಮ್ಮ ಹತ್ರ ಮಾತಾಡ್ಬೇಕು, ಅವರ ಅಕ್ಕ,ತಂಗಿ, ಅಣ್ಣಾ ತಮ್ಮ ,ಪಕ್ಕದ್ ಮನೆಯವ್ರು..ಎಲ್ಲರ data ಇಟ್ಕೊಬೇಕೂ!! ಉಸ್ಸಪ್ಪಾ!! ದಿನಾ ಸೀರೆ ಇಟ್ಕೋಬೇಕು! ಮತ್ತೆ ಇನ್ನೊಂದ್ ಏನು ಅಂದ್ರೆ, student project ಮಾಡಿಸಬೇಕು.. ಬೇರೆ ಬೇರೆ accreditations ಗೆ, ಬೇರೆ ಬೇರೆ format ಅಲ್ಲಿ ಒಂದೇ data ನ ತುಂಬಿಸಬೇಕು.. ! IT industry ಸೇರಿದ್ರೆ, atleast ಒಂದೇ technology ಅಥವಾ tool ಕಲಿತು, life-long ಅದರಲ್ಲೇ ಸ್ವಲ್ಪ ಸ್ವಲ್ಪ update ಆಗ್ತಾ ಇದ್ರೂ ಜೀವನ ಸೆಟಲ್ ಆಗ್ತಿತ್ತು.. ಆದ್ರೆ, ನಮಗೆ ಇಲ್ಲಿ ಒಂದು

semester Java ಹೇಳಿಕೊಡಿ ಅಂತಾರೆ, ಇನ್ನೊಂದು semester python.. ಮತ್ತೊಂದು semester .net.. so, ನಮಗೆ ಯಾವುದನ್ನೂ in-depth ಕಲಿಸೋಕು ಕಷ್ಟ, ಕಲಿಯೋಕೂ ಕಷ್ಟ..!

ಇಷ್ಟೂ ಕೆಲಸಗಳ ಮಧ್ಯೆ, students ಮನಸ್ಥಿತಿ definitely over the years ತುಂಬಾ change ಆಗಿದೆ . .

ನಮ್ಮ ತಂದೆ ತಾಯಿ ಅವರ ಗುರುಗಳಿಗೆ ಕೊಟ್ಟಷ್ಟು ಮರ್ಯಾದೆ,ಗೌರವಗಳನ್ನು ನಾವು ಕೊಟ್ಟಿಲ್ಲ ಅನ್ಸತ್ತೆ.. ಆದರೆ ನಾವು ಈಗಿನ ಮಕ್ಕಳಷ್ಟು worst ಅಂತೂ ಇರಲಿಲ್ಲ.. ಎಲ್ಲೇ ಒಬ್ಬ ಟೀಚರ್ ನ ನೋಡಿದ್ರೂ, by default wish ಮಾಡ್ತಿದ್ವಿ.. ಅವರ presence ನ acknowledge ಮಾಡ್ತಿದ್ವಿ.. ಇನ್ನು ನಮ್ next generation ಅಂತೂ ಕೇಳೋದೇ ಬೇಡ..first year engineering, first sem ಅಲ್ಲಿ ಅಷ್ಟೇ ಅವರ ಮರ್ಯಾದೆ ಎಲ್ಲಾ.. ಆಮೇಲೆ ಮುಗೀತು.. road ಅಲ್ಲಿ ಹೋಗ್ತಿದ್ದಾಗ ಸಿಕ್ಕಿದ್ರೆ.. ‘kya re’ ಅನ್ನಲ್ಲ.. ನಾವೆಷ್ಟೇ ಪ್ರೀತಿ ತೋರ್ಸಿದ್ರು ಮಕ್ಕಳಿಗೆ, ಅವರಿಗೆ ನಾವು ಬರೀ ಸಂಬಳ ತೊಗೊಂಡು ಕೆಲಸ ಮಾಡೋರು.. ಅಷ್ಟೇ..

ಈಗಿನ ಮಕ್ಕಳ attitude ಹೇಗೆ ಅಂದ್ರೆ, ಎಲ್ಲದಕ್ಕೂ “ಗುರು ಯಾಕ್ ಬೇಕು ?? ನಮ್ಗೆ google ಇದೆ ಸಾಕು” ಅಂತಾರೆ.. but ಅವರಿಗೆ ಗೊತ್ತಿಲ್ಲ, ಒಂದು ತರಗತಿ ಅಲ್ಲಿ ಬರೀ ಪಾಠ ಅಲ್ಲ, ಇನ್ನೂ ಎಷ್ಟೋ ವಿಚಾರಗಳು ಇರತ್ತೆ ಕಲಿಯೋಕೆ ಅಂತ..!

ಮಕ್ಕಳಿಗೆ ಈಗ ಎಷ್ಟು facilities ಕೊಟ್ಟರೂ, ಚಿಕ್ಕ ಚಿಕ್ಕ ವಿಷಯಗಳಿಗೆ suicide, depression.. ಇದೆಲ್ಲಾ ಜಾಸ್ತಿ ಆಗಿರೋದು ಯಾಕೆ ?! ಮಕ್ಕಳ ಮನಸ್ಥಿತಿ ಅರ್ಥ ಮಾಡಿಕೊಳ್ಳೋಕೆ, ಅಂತಾನೇ university ಗಳಲ್ಲಿ ಈಗ ಒಬ್ರು counsellor ಕೂಡ ಇರೋಹಾಗೆ ಆಗಿದೆ..!
( ತುಂಬಾ ಮಾತಾಡ್ತಾ ಇದೇನಾ ??! )

On a lighter note.. actually lecturer ಆಗಿ ಈ ಕಾಲದಲ್ಲಿ ಇರೋದು ತುಂಬಾ ಕಷ್ಟ.. ಯಾಕೆ ಗೊತ್ತಾ.. ನಮ್ social life u.. social media post u.. ಎಲ್ಲಾ students ನೊಡ್ತಿರ್ತಾರೆ.. so, boyfriend jothe photo ಹಾಕಂಗಿಲ್ಲ.. bold dress photos ಹಾಕೋಕೆ ಆಗಲ್ಲ.. ಎಲ್ಲದಕ್ಕೂ ಜಡ್ಜ್ ಮಾಡ್ತಾರೆ!! Judge ಮಾಡಿದ್ರೂ ಪರವಾಗಿಲ್ಲ.. meme ಮಾಡ್ತಾರೆ!! ಹ್ಹ ಹ್ಹಾ.. !

ನಮ್ಗೆ IT ಅವರ ತರ ಸಂಬಳ ನೂ ಇಲ್ಲಾ, ಸವಲತ್ತು ಇಲ್ಲಾ, ಹಾಗೇ weekend u ಇಲ್ಲಾ.. ಹೋಗ್ಲಿ national holidays ದಿನಾ ಕೂಡ ನಾವು ಕಾಲೇಜ್ ಅಲ್ಲಿ ಪ್ರೋಗ್ರಾಂ ಮಾಡಬೇಕು! ಹೋಗ್ಲಿ, ಹೇಗೋ ಒಂದು ಭಾನುವಾರ ಸಿಗತ್ತೆ ಅಂದ್ರೆ, ಅವತ್ತಿನ ದಿನ research ಗೆ ಮೀಸಲಿಡಬೇಕು..! ಇಷ್ಟೆಲ್ಲಾ ಇದ್ರೂ, class ಅಲ್ಲಿ ಒಂದ್ hour ಪಾಠ ಮಾಡಿ, ಮಕ್ಕಳಿಗೆ ಅರ್ಥ ಆಯ್ತು ಅಂದಾಗ ಆಗೋ ನೆಮ್ಮದಿ, ಖುಷಿ ನೇ ಬೇರೆ..! Alumni students ನಮ್ಮನ್ನ ನೆನಪಿಸಿಕೊಂಡು ಒಂದು ಮೆಸೇಜ್ ಮಾಡಿದ್ರೆ ಸಾಕು.. ಎಷ್ಟ್ ಖುಷಿ ಆಗತ್ತೆ ಗೊತ್ತಾ ?! Definitely ನಯಾ ಪೈಸೆ ಬೇಜಾರಿಲ್ಲ ನಂಗೆ ಈ ಪ್ರೊಫೆಷನ್ choose ಮಾಡಿದಕ್ಕೆ.. i just love this!!

ಸುಧಾ ಅಲ್ಲಿ ನಿನ್ನೆ ಓದಿದ್ದು.. ” ಶಿಕ್ಷಕ ವೃತ್ತಿಯನ್ನುವುದು, ಎಲ್ಲಿಂದಲೋ ಹಾರಿ ಬಂದು ಗೂಡು ಕಟ್ಟಿಕೊಂಡು ಮರಿ ಮಾಡಿ ಮತ್ತೆ ಹಾರಿ ಹೋಗುವ ಹಕ್ಕಿಗಳಿಗೆ ಹಣ್ಣು ಕೊಟ್ಟು, ಮಡಿಲಲ್ಲಿ ಇರಿಸಿಕೊಂಡು,ಹರಸಿ ಹಾರೈಸಿ, ಮುಂದಕ್ಕೆ ಹಾರಲು ಬಿಡುವ ಮರದ ಹಾಗೆ.. ಅಸಂಖ್ಯ ಹಕ್ಕಿಗಳ ರೆಕ್ಕೆಗಳಿಗೆ ಕಸುವು ತುಂಬಿ ಹಾರಲು

ಆಕಾಶವನ್ನು ಬಿಟ್ಟು ಕೊಡುವ ಮರ ಮಾತ್ರ ನಿಂತಲ್ಲೇ ನಿಂತಿರುತ್ತದೆ..ಆಳಕ್ಕೆ ಬೇರು ಬಿಡುತ್ತಾ, ಆಕಾಶಕ್ಕೆ ಮುಖ ಮಾಡುತ್ತಾ” ಎಷ್ಟು meaningful ಆಗಿದೆ ಅಲ್ವಾ ಈ ಲೈನ್ಸ್..!

ಇನ್ನು ಈ post ನ ಎಳಿದರೆ ನಿಮ್ಗೂ bore ಆಗತ್ತೆ! ಅದಿಕ್ಕೆ,ಇಲ್ಲೇ ಮುಗಿಸ್ತಿನಿ.. ಮುಗಿಸೋ ಮುಂಚೆ, ನನ್ನೆಲ್ಲಾ ಪ್ರೀತಿಯ ಗುರುಗಳಿಗೆ “Happy teacher’s day” .. ನನ್ನೆಲ್ಲಾ ಮಕ್ಕಳ ಹತ್ತಿರ ಒಂದೇ ಒಂದು ಕೋರಿಕೆ.. ” acknowledge the efforts of a teacher” !

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..