5932

ಷೇರು ಮಾರುಕಟ್ಟೆ: ನೀವು ತಿಳಿದಿರಲೇಬೇಕಾದ 7 ಮುಖ್ಯ ವಿಷಯಗಳು

  • By Guest Writer
  • Thursday, October 20th, 2016
  • Things You Should Know

ಯಾರಿಗೆ ಸಾಲುತ್ತೆ ಸಂಬಳ
ಯಾರಿಗೆ ಸಾಲುತ್ತೆ ಸಂಬಳ

ಯಾರಿಗೆ ಸಾಲುತ್ತೆ ಸಂಬಳ ಚಿತ್ರದಲ್ಲಿ ಶಶಿ ಕುಮಾರ್, ಮೋಹನ್ ಹಾಗೂ ಕರಿಬಸವಯ್ಯ ಲೂನಾ ಅಥವಾ ಟಿವಿಎಸ್ ಗಾಡಿಯ ಮೇಲೆ ಹೀಗೊಂದು ಹಾಡು ಹಾಡುತ್ತಾ ಬರುವ ಹಳೇ ಹಾಡು ನೀವು ನೋಡಿರಬಹುದು. ಆ ಸಿನಿಮಾ ಬಂದು ಆಗಲೇ ಸುಮಾರು 16 ವರ್ಷ ಆಗಿದೆ. ಆದರೂ ಆ ‘ಯಾರಿಗೆ ಸಾಲುತ್ತೆ ಸಂಬಳ’ ಅನ್ನೋ ಪ್ರಶ್ನೆ ಇಂದಿಗೂ ಪ್ರಸ್ತುತ. ಎರಡು ವರ್ಷದ ಹಿಂದೆ ನನ್ನ ಬಳಿ‌ ಕೆಲಸ ಇರಲಿಲ್ಲ. ಆಗ 10,000 ಸಂಬಳ‌ಇರೋ ಕೆಲಸ ಸಿಕ್ಕರೆ ಸಾಕಪ್ಪ ಹೆಂಗೋ ಮಜಾ ಮಾಡ್ಕೊಂಡು ಇರಬಹುದು ಅಂದ್ಕೊಳ್ತಿದ್ದೆ. ಆದರೆ ಈಗ 20,000 ಸಂಬಳ ಬರುವ ಉದ್ಯೋಗವಿದ್ದರೂ ತಿಂಗಳ ಕೊನೆಯಲ್ಲಿ ಕ್ರೆಡಿಟ್ ಕಾರ್ಡ್ ಮೊರೆ ಹೋಗದೇ ವಿಧಿಯಿಲ್ಲ. ಮೊನ್ನೆ ಹೀಗೆ ಮಾತನಾಡುವಾಗ ನಮ್ಮ ಹುಡುಗನೊಬ್ಬ “ಅಯ್ಯೋ, ಏನ್ ಮಾಡ್ಲಿ ಮಗಾ, ನನ್ನ ಸಂಬಳ ತುಂಬಾ ಕಮ್ಮಿ, ರೋಡಲ್ಲಿ‌ ಪಾನಿ‌ ಪೂರಿ ಮಾರೋನು ನನಗಿಂತ ಹೆಚ್ಚಿಗೆ ದುಡಿಯುತ್ತಾನೆ. ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು” ಅಂತ ಅವಲತ್ತುಕೊಳ್ಳುತ್ತಿದ್ದ. “ಹೋಗ್ಲಿ ಬಿಡು ಮಗಾ, ಪಾಪ ಅವನ ತಟ್ಟೆಯ ಪಾನಿ ಪೂರಿ ಮೇಲೆ ಯಾಕೆ ಕಣ್ಣು ಹಾಕ್ತೀಯಾ,‌ ನಿನ್ ತಟ್ಟೆಯಲ್ಲಿರೋ ಮುದ್ದೆ ಬಸ್ಸಾರನ್ನೇ ಪಾಯಸ ಅಂದ್ಕೊಂಡು ತಿನ್ನುವಂತೆ. ಸರಿ ಬಿಡು, ಎಷ್ಟು ನಿನ್ ಪ್ಯಾಕೇಜ್ ಹೇಳು ಹೋಗಲಿ” ಅಂದೆ. “ಹೇಳೋಕೆ ನಂಗೇ ಅಳು ಬರುತ್ತೆ ಮಗಾ, ಜಸ್ಟ್ ₹52,000 ಮಾತ್ರ” ಅನ್ನೋದಾ? ಅತ್ತು ಅತ್ತು ನನಗೇ ಎರಡು ದಿನ ನಿದ್ದೆ ಬರಲಿಲ್ಲ. Jokes aside, ತಿಂಗಳ ಸಂಬಳಕ್ಕೆ ಅಂಬಾ ಎಂದು ಕಾಯುವ ನಮ್ಮಂಥವರಿಂದ ಹಿಡಿದು ಅಂಬಾನಿವರೆಗೂ ‘ಸಂಬಳ’ ಅಥವಾ ‘ಲಾಭ’ ಯಾರಿಗೂ ಸಾಕಾಗೋದಿಲ್ಲ. ಉಳಿಸಿದ ಹಣವೇ ಗಳಿಸಿದ ಹಣ ಎಂದು ಹೇಳುತ್ತಾರಾದರೂ, ‘ಉಳಿಸಿದ’ ಹಣವನ್ನು ‘ದುಡಿಸಲು’ ಬಿಡುವುದು ಜಾಣತನ. Confused? ನಿಮ್ಮ ಉಳಿತಾಯದ ಹಣವನ್ನು ಪೋಸ್ಟ್ ಆಫೀಸ್, ಬ್ಯಾಂಕ್, PPF, ಇನ್ಶೂರೆನ್ಸ್ ಹೀಗೆ ಹಲವಾರು ಕಡೆ ತೊಡಗಿಸಬಹುದು. ಆದರೆ ಇಲ್ಲೆಲ್ಲಾ profit margin ಕಮ್ಮಿ. ಬದಲಾದ ಕಾಲದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಲಾಭದಾಯಕ ಎಂದು ಸಾಬೀತಾಗಿದೆ. ಆದರೆ ಷೇರು ಮಾರುಕಟ್ಟೆ ಅತ್ಯಂತ volatile ಕೂಡ ಆಗಿದೆ. ಆದ್ದರಿಂದ ಜಾಣತನದಿಂದ ಹೆಜ್ಜೆ ಇಡಬೇಕಾದದ್ದು ಅನಿವಾರ್ಯ. ಅದರ ಕುರಿತು ಕೆಲವು ಟಿಪ್ಸ್ ಗಳು ಇಲ್ಲಿವೆ:

1. ನೀರಿನ ಆಳ ತಿಳಿಯೋದು ಹೇಗೆ?
ಷೇರು ಪೇಟೆ ಅಂದರೆ ನನಗೇನೂ ಗೊತ್ತಿಲ್ಲಪ್ಪ, ನಮ್ ಗೆಳೆಯನ ಮಾವನ ಚಿಕ್ಕಪ್ಪನ, ಸೋದರ ಅಳಿಯನೊಬ್ಬ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಮುಳುಗಿ ಹೋದರಂತೆ ಎಂಬಿತ್ಯಾದಿ ಭಯ ನಿಮ್ಮನ್ನು ಆವರಿಸಿದ್ದರೆ ಮೊದಲು ಅವನ್ನು ತಲೆಯಿಂದ ತೆಗೆದು ಹಾಕಿ. ಲಾಭ ನಷ್ಟ ಎಂಬುದು ವ್ಯಾಪಾರ ಎಂಬ ನಾಣ್ಯದ ಎರಡು ಮುಖಗಳಿದ್ದಂತೆ. ಇದಕ್ಕೆ ಷೇರು ಮಾರುಕಟ್ಟೆಯೂ ಹೊರತಲ್ಲ. ಷೇರು ಮಾರುಕಟ್ಟೆಯ ಜ್ಞಾನ ನಿಜವಾಗಿಯೂ ಸಾಗರದಷ್ಟು ಬೃಹತ್ ಎಂದರೆ ತಪ್ಪಾಗಲಾರದು. ಈ ಸಾಗರದ ಆಳ ಅಗಲ ತಿಳಿಯಬೇಕೆಂದರೆ ಮೊದಲು ಒಂದು Demat Account ಮಾಡಿಸುವ ಮೂಲಕ ನೀವು ನೀರಿಗಿಳಿಯಬೇಕು. Zerodha, Kotak Mahindra, Karvi, Angel Broking, SBI, sharekhan ಇತ್ಯಾದಿ ಹಲವಾರು ಬ್ರೋಕಿಂಗ್ ಸಂಸ್ಥೆಗಳು ಈ ಸೇವೆ ಒದಗಿಸುತ್ತವೆ. ಡೀಮ್ಯಾಟ್ ಖಾತೆ ಇಲ್ಲದವರು‌ ಮೊದಲು ಒಂದು ಖಾತೆ ತೆರಿಯಿರಿ, ಆಮೇಲಿಂದ್ ಆಮೇಲೆ!

1

2. ಗುರು ಬ್ರಹ್ಮ ಗುರು ವಿಷ್ಣು
ಜೀವನದಲ್ಲಿ ಹಿಂದೆ ಗುರು ಮುಂದೆ ಗುರಿ ಇರಬೇಕು ಎಂಬ ಮಾತು ಕೇಳಿರುತ್ತೀರಾ. Stock market ಕೂಡ ಇದಕ್ಕೆ ಹೊರತೇನಲ್ಲ. ಷೇರು ಮಾರುಕಟ್ಟೆಯ ಕುರಿತು ಪುಸ್ತಕ ಓದುವ, ಇಲ್ಲವೇ ಕಾರ್ಯಾಗಾರ ಸೇರುವ, ಅಥವಾ ಆನ್ಲೈನ್ ಕಲಿಕಾ ವೀಡಿಯೋಗಳನ್ನು ನೋಡುವುದನ್ನು ರೂಢಿಸಿಕೊಳ್ಳಿ. ಈಗಾಗಲೇ ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ಪ್ರವೀಣನಾಗಿರುವ ಗೆಳೆಯರು ಇದ್ದರೆ ಇನ್ನೂ ಒಳ್ಳೆಯದು. ಆ ಕ್ಷೇತ್ರದಲ್ಲಿ ಏನೆಲ್ಲಾ ಹೊಸ ವಿದ್ಯಮಾನಗಳು ನೆಡೆಯುತ್ತಿವೆ, ಸೂಚ್ಯಂಕದ ಏಳು ಬೀಳುಗಳನ್ನು ಹೇಳಲು ಗೊತ್ತಿರುವವರು ಇದ್ದರೆ ತುಂಬಾ ಅನುಕೂಲಕರ. ನಿಮಗೆ ಅಂತ ಒಬ್ಬರು ಮೆಂಟರ್ ಅನ್ನು ಗೊತ್ತು ಮಾಡಿಕೊಳ್ಳಿ. ಸಮಾನ ಮನಸ್ಕರ WhatsApp ಗುಂಪು ಸೇರಿದರಂತೂ ಇನ್ನೂ ಒಳ್ಳೆಯದು.

3

3. Funds ಕಹಾ ಹೈ, ಅಂದ್ರೆ ಊರ್ ತುಂಬಾ ಹೈ
ಹೂಡಿಕೆಯ ವಿಷಯ ಬಂದಾಗ ಅತ್ಯಂತ ಚತುರ ನಿರ್ಣಯವೆಂದರೆ ನಿಮ್ಮ ಉಇತಾಯದ ಹಣವನ್ನು ಹಲವಾರು ಬೇರೆ ಬೇರೆ ಕಡೆಗಳಲ್ಲಿ ತೊಡಗಿಸುವುದು. ಎಲ್.ಐ.ಸಿ., FD-RD ಗಳು, ಅಂಚೆ ಕಚೇರಿ, PPF, Equities, ಹೀಗೆ ಹಲವಾರು ಅನುಕೂಲಕರ ಸೌಲಭ್ಯಗಳಿವೆ. ಈರುಳ್ಳಿ ಬೆಳೆದು, ಬೆಲೆ ಇಳಿದಾಗ ಮಾರುಕಟ್ಟೆಯಲ್ಲಿಯೇ ಬಿಟ್ಟು ಹೋಗುವ ರೈತರ ಪಾಡು ಪೇಪರ್ ನಲ್ಲಿ ಓದಿರುತ್ತೇವೆ. ಈ ರೀತಿ ಬೆಲೆ ಇಳಿಕೆಗೆ ಹಲವಾರು ಕಾರಣಗಳಿದ್ದರೂ ಎಲ್ಲಾ ಹಣವನ್ನು ಒಂದೇ ಬೆಳೆಯಲ್ಲಿ ತೊಡಗಿಸುದ್ದೂ ಕೂಡ ಒಂದು ಕಾರಣವೆನ್ನಬಹುದು. ಈ ಸಿದ್ಧಾಂತವು ಷೇರು ಮಾರುಕಟ್ಟೆಗೂ ಅನ್ವಯಿಸುತ್ತದೆ. ಒಂದೇ ಕಂಪನಿಯ 500 ಷೇರುಗಳನ್ನು ಕೊಳ್ಳುವ ಬದಲು 5 ಬೇರೆ ಬೇರೆ ಕಂಪನಿಗಳ 100 ಷೇರುಗಳನ್ನು ಕೊಳ್ಳುವುದು ಲೇಸು.

invest

 

4. Only updates I get are updates
ಕಾಲಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಎಂಬ ಮಾತು ಕೇಳಿರುತ್ತೀರಿ. ನಾವು ಯಾವಾಗಲೂ ಕಾಲದ ಜೊತೆ ಕಾಲು ಹಾಕಿಕೊಂಡು ಸದಾ ಮುನ್ನೆಡೆಯುತ್ತಿರಬೇಕು. ಒಬ್ಬ ಕ್ರಿಯಾಶೀಲಾ ಹುಡಿಕೆದಾರನಿಗೆ ಇರಬೇಕಾದ ಬಹುಮುಖ್ಯ ಗುಣ ಇದು. 2000 ರಲ್ಲಿ Infosys ಷೇರು ಇಷ್ಟಿತ್ತು, ಅದರ ಬೆಲೆ ಈಗ ಇಷ್ಟಾಗಿದೆ. ನೋಡಿದಾ ಷೇರು ಮಾರುಕಟ್ಟೆ ಟ್ರೆಂಡ್ ಹೇಗಿದೆ ಅಂತ ಒಂದಕ್ಕೆ ಎರಡು ಸೇರಿಸಿ ಹೇಳುವವರು ಸುಮಾರು ಜನ ಸಿಗುತ್ತಾರೆ. ಆದರೆ ಸತ್ಯಂ ಹಾಗೂ ಇತರ ಕಂಪನಿಗಳ ಷೇರುದಾರರು ಏನಾದರು ಎಂಬ ಮಾಹಿತಿ ಇಲ್ಲ. ವಿಷಯ ತುಂಬಾ ಸರಳ ಸ್ವಾಮಿ, knowledge is divine, ಷೇರು ಮಾರುಕಟ್ಟೆಯ ವಿಷಯದಲ್ಲಿ ಎಷ್ಟು ತಿಳಿದುಕೊಳ್ಳುವಿರೋ ಅಷ್ಟು ಒಳ್ಳೆಯದು. ಆದ್ದರಿಂದ ಮಾರುಕಟ್ಟೆಯ ಟ್ರೆಂಡ್, pattern ಗಳನ್ನು ಅಧ್ಯಯಿಸುತ್ತಾ ಯಾವಾಗಲೂ update ಆಗುತ್ತಿರಿ.

44

5. ಅಲ್ಲೇ ಡ್ರಾ, ಅಲ್ಲೇ ಬಹುಮಾನ
ಸಾಮಾನ್ಯವಾಗಿ ಷೇರು ಹೂಡಿಕೆದಾರರಲ್ಲಿ ಎರಡು ವಿಧ:
* ನಿತ್ಯ ಹೂಡಿಕೆದಾರರು
* ಧೀರ್ಘ ಹೂಡಿಕೆದಾರರು
ನಿತ್ಯ ಹೂಡಿಕೆದಾರರು ಯಾವಾಗಲೂ ತಮ್ಮ ಗಮನ NIFTY, SENSEX ಸೂಚ್ಯಂಕದ ಮೇಲೆ ಇರುತ್ತದೆ. The Wolf of Wall Street ಚಿತ್ರದಲ್ಲಿ ಕಾಣಬಹುದಾದ seriousness ಇವರಲ್ಲಿರುತ್ತದೆ. ಒಂದೊಂದು ಪಾಯಿಂಟ್ ಏರಿಳಿತದಲ್ಲೂ ಎಷ್ಟು ಲಾಭ ಮಾಡಬಹುದು ಎಂದು ಸದಾ ಲೆಕ್ಕ ಹಾಕುತ್ತಾ buy / sell ವ್ಯವಹಾರಗಳನ್ನು ಮಾಡುತ್ತಿರುತ್ತಾರೆ. ಆ ದಿನದ ಲಾಭ / ನಷ್ಟ ಎಷ್ಟು ಅಂತ ಅವರಿಗೆ ಆ ದಿನದ ಸಾಯಂಕಾಲವೇ ಗೊತ್ತಾಗಿ ಬಿಡುತ್ತದೆ.
ದೀರ್ಘ ಹೂಡಿಕೆದಾರರು ತಮ್ಮ ಉಳಿತಾಯದ ಮೊತ್ತವನ್ನು ತಮ್ಮ ಅತ್ಯಂತ ನಂಬುಗೆಯ ಕಂಪನಿಯಲ್ಲಿ ಹೂಡಿಕೆ ಮಾಡಿ ದೀರ್ಘ ಕಾಲದವರೆಗೆ ಹಾಗೆಯೇ ಬಿಟ್ಟಿರುತ್ತಾರೆ. ಯಾವಾಗಲಾದರೂ ಹಣದ ಅಗತ್ಯ ಬಂದಾಗ ಮಾತ್ರ ಆ ಷೇರುಗಳನ್ನು ನಗದಾಗಿ ಪರಿವರ್ತಿಸಿಕೊಳ್ಳುತ್ತಾರೆ. ಪ್ರತಿ ದಿನವೂ ಷೇರು ಮಾರುಕಟ್ಟೆಯ ಸೂಚ್ಯಂಕಗಳ ಕಡೆ ಗಮನ ಕೊಡಲಾಗದವರು ಈ ಗುಂಪಿಗೆ ಒಳಪಡುತ್ತಾರೆ.
ಈ ಎರಡು ವಿಧಗಳಲ್ಲಿ ನಿಮಗೆ ಯಾವುದು ಅನುಕೂಲಕರವೋ ಆ ವಿಧಾನವಾಗಿ ಹೂಡಿಕೆ ಮಾಡಿ.

d

6. ತಪ್ಪು ಮಾಡೋದು ಸಹಜ ಕಣೋ
It’s okay to make mistakes, but it’s a greater mistake not to learn from them ಎಂಬ ಮಾತಿದೆ. ತಪ್ಪು ಎಲ್ಲರಿಂದಲೂ ಆಗುತ್ತದೆ. ಅದರಿಂದ ಪಾಠ ಕಲಿತು ಮುನ್ನಡೆಯಬೇಕು. ಷೇರು ಹೂಡಿಕೆಯಲ್ಲೂ ಒಮ್ಮೊಮ್ಮೆ ಲೆಕ್ಕಾಚಾರಗಳು ಏರುಪೇರಾಗುತ್ತವೆ. ಸೂಚ್ಯಂಕದಲ್ಲಿ ವ್ಯಾಪಕವಾಗಿ ಏರಿಳಿತಗಳಾಗಿ ನಷ್ಟವಾಗುವ ಸಾಧ್ಯತೆ ತುಂಬಾ ಇರುತ್ತದೆ. ಷೇರು ಮಾರುಕಟ್ಟೆಯ ಒಂದು ಉತ್ತಮ ವಿಷಯವೆಂದರೆ ಇಲ್ಲಿ loss limited, profit unlimited. ಆದರೆ ಗಮನಿಸಬೇಕಾದ ಅತಿಮುಖ್ಯ ಅಂಶವೆಂದರೆ ನಷ್ಟವಾದಾಗ ಯಾಕೆ ಎಂದು ಸ್ಥೂಲವಾಗಿ ಅಧ್ಯಯನ ಮಾಡಿ ಮುಂದೆ ಆ ರೀತಿ ಯಡವಟ್ಟಾಗದಂತೆ ಮುನ್ನೆಡೆಯಬೇಕು

4

7. Sharing is Caring
Knowledge is divine, ಯಾಕೆ ಗೊತ್ತಾ? ನಿಮ್ಮಲ್ಲಿರುವ ಹಣ ನೀವು ಇನ್ನೊಬ್ಬರಿಗೆ ಕೊಟ್ಟರೆ cut paste ಮಾಡಿದ ಹಾಗೆ. ಆದರೆ ನಿಮ್ಮ ಜ್ಞಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ಅದು copy paste ಮಾಡಿದ ಹಾಗೆ, ನಿಮ್ಮಲ್ಲೂ ಇರುತ್ತೆ, ಅವರಲ್ಲೂ ಕೂಡ. ಆದ್ದರಿಂದಲೇ sharing is caring ಎಂದು ಹೇಳಿರುವುದು. ಹೊದಾಗಿ IPO ಬಿಡುಗಡೆಯಾಗುವ ಮಾಹಿತಿ ಇರಬಹುದು, ಅರ್ಧ ವಾರ್ಷಿಕ, ವಾರ್ಷಿಕ ವರದಿ ಬಿಡುಗಡೆ ದಿನಾಂಕ, ಹೊಸ CEO ನೇಮಕ ಇತ್ಯಾದಿಯಾಗಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಏರಿಳಿತವಾಗುವ ಸುದ್ದಿ ಗೊತ್ತಾದರೆ ಕೂಡಲೇ ನಿಮ್ಮ ಗೆಳೆಯರಿಗೆ ಹೇಳಿ. A friend in need is a friend in deed ಎಂಬುವಂತೆ ಒಬ್ಬರಿಗೊಬ್ಬರು ಸಹಾಯ ಮಾಡಿದಾಗಲೇ ತಾನೆ ಸ್ನೇಹದ ಬುನಾದಿ ಗಟ್ಟಿಯಾಗುವುದು. ನಿಮಗೆ ಏನಾದರೂ ಗೊತ್ತಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಅವರಿಗೇನಾದರೂ ಗೊತ್ತಾದಾಗ ಖಂಡಿತಾ ನಿಮಗೆ ತಿಳಿಸುತ್ತಾರೆ.

7

ನಿಜ ಹೇಳಬೇಕೆಂದರೆ, ಈ ಷೇರು ಮಾರುಕಟ್ಟೆ ರಂಗಕ್ಕೆ ನಾನೂ ಕೂಡ ಹೊಸಬ. ಆದರೆ ನನಗೆ ಗೊತ್ತಿರೋದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ತವಕದ ಪ್ರತಿಫಲವೇ ಈ ಅಂಕಣ. ಇಷ್ಟು ಓದಿದ್ದೀರಾ, ಇಷ್ಟ ಆದರೆ ಲೈಕ್ ಮಾಡಿ, ಏನಾದರೂ ತಪ್ಪು, ಹೆಚ್ಚಿನ ಮಾಹಿತಿ, ಮೆಚ್ಚುಗೆ ಇದ್ದರೆ ಕಾಮೆಂಟ್ ಮಾಡಿ, ಹಂಗೇ ಮತ್ರೂ ಇಷ್ಟ ಆದರೆ ನಿಮ್ಮ ಆಪ್ತ ವಲಯಕ್ಕೆ ಷೇರ್ ಮಾಡಿ. After all, sharing is caring, ಅಲ್ವಾ??!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..