2915

ಮರೆತರು ಮರೆಯಾಗದ ಮಾಯೆ ನೀನು…!!!

ನೆನಪುಗಳೆ ಹೀಗೆ ಕಣ್ಣಾ ಹನಿಯಲ್ಲಿ ತೊಯ್ದರೂ,ಸುಡುವ ಎದೆಯಲ್ಲಿ ಬೆಂದರೂ,ಮತ್ತೆ ಮತ್ತೆ ಮನಸ್ಸಲ್ಲಿ ತೇಲಿ ಬಂದು ಅಗತ್ಯತೆಯನ್ನು ಮರೆತು ಅಸ್ತಿತ್ವವನ್ನು ತೊರ್ಪಡಿಸುವ ತೇರು ಇದ್ದಂತೆ…..
ನೆನಪುಗಳು ನೂರೇ ಇದ್ದರೂ,ಅದರೊಲ್ಲೊಂದು ಎಲ್ಲಾವದಕ್ಕೂ ಮಿಗಿಲಾದ,ಎಲ್ಲಾವದಕ್ಕೂ ಹಿರಿಯಣ್ಣಾನಂತೆ,ಎಲ್ಲವಾನ್ನು ಮರೆಮಚಿಸುವ,ನೆನಪುಗಳ ಸಂಕಲನಕ್ಕೆ ಶಿರ್ಷಿಕೆಯಾಗಬಲ್ಲಾ ನೆನಪೆಂದರೆ ಅದು ಪ್ರೀತಿ ನೆನಪು..ಮೊದಲ
ತೊದಲಾ ಪ್ರೀತಿ..ಕಣ್ಮುಚಿದರೂ,ಕಣ್ತೆರೆದರು ಕಣ್ಣ್ಂಚಲ್ಲಿ ತೇಲುತಿದ್ದ ಪ್ರೀತಿಯ ನೆನಪು…. ಹೌದು ಎಲ್ಲರಂತೆ ಎಲ್ಲಾ ಭಾವಜೀವಿಗಳಾ ಭಾವನಾತ್ಮಕ ಬದುಕಲ್ಲಿ ನೆಡೆವಂತೆ ನನ್ನ ಬದುಕಲ್ಲಿ ನನ್ನ ಭಾವನೆಗಳಿಗೆ ಬಗೆಬಗೆಗಿನ ಬಣ್ಣಾ
ಹಚ್ಛಿ,,ಹ್ರದಯದಲ್ಲಿ ಪ್ರೀತಿ ದೀಪ ಹಚ್ಚಿ,ಇಂದು ನೆನಪುಗಲ್ಲಿ ಮಾತ್ರ ನೆನಪಾಗಿ ಉಳಿದ ಸ್ವಚ್ಚ ಹ್ರದಯದ ಆ ನನ್ನಾ ಹುಡುಗಿ ನೆನಪು…….
ಓಂದೊಂದು ಕ್ಷಣ ಅನಿಸುವುದುಂಟು,ನನ್ನ ಪ್ರೀತಿ ನಿನ್ನ ಪಾಲಿಗೆ ನನ್ನ ನೆನಪುಗಳಿಗಷ್ಟೇ ಸೀಮಿತ,,,ನಿನ್ನೊಂದಿಗರಲು ಆ ನನ್ನಹ್ರದಯದ ತುಡಿತ,ಬದುಕಿದರೆ ನಿನ್ನೊಂದಿಗೆ ಬದುಕಬೇಕೇಂಬ ಧಾವಂತ,…..ನಿನ್ಬಗೆಗಿನ ಆ ನೂರು ಕನಸು, ನನ್ಬಗೆಗಿನ ಆ ನಿನ್ನ ಮುದ್ದಾದ ಮುನಿಸು,ಎಲ್ಲಾವು ಎಡೆಬಿಡದೆ ನೆನಪಲ್ಲಿ ಇನ್ನೂ ಜೀವಂತ,,,,,, ನಾನು,ನೀನು,ನಮ್ಮಿಬ್ಬರ ಆ ಪ್ರೀತಿ,ಆ ಆತ್ಮಿಯತೆ, ಎಲ್ಲಾವು ಕೂಡ ನೆನಪುಗಳಲ್ಲಿ ಇನ್ನೂ ವಾಸ್ತವ,,,,,, ಉಳಿದವರು ಕಂಡಂತೆ ಎಲ್ಲಾವು ಸ್ತಬ್ದ,,, ಏನೂ ಇಲ್ಲಾ ಅಂತ ಸಾರಿ ಹೇಳೊ ಕರಿಛಾಯೆ,ನಿಶ್ಯಾಬ್ದ………

ಹೇಳಲಾರದ ಪ್ರೀತಿ,, ನಡುವಲ್ಲಿ ನಂಬಿಕೆ ಎನ್ನುವ ನೀತಿ,,ಪರಿ ಪರಿಯ ಭೀತಿ,, ಇವೆಲ್ಲಾವುದರ ಮಧ್ಯೆ ಆ ಏಲ್ಲಾ ನೆನಪುಗಳಾ ನೋವು,ಮನಪಟಲದ ಪುಟಪುಟದಲ್ಲಿ ಆ ನಿನ್ಬಗೆಗಿನ ಕನಸುಗಳ ಕಾವು,ಒಮ್ಮೊಮ್ಮೆ ನಾನಿನ್ನು ಜೀವಂತ ಅಂತ ಆ ನೋವುಗಳ ಮಧ್ಯೆ ಹಿತವಾದ ನಲಿವು,,..  ಎಲ್ಲಾವುದರ ಮೇಲೆ ಎನೂ ಉಳಿದಿಲ್ಲಾ,,ಎಲ್ಲಾ ಮರೆತಂತೆ ಬದುಕಬೇಕಾದ ಅಗತ್ಯತೆ,ಅನಿವಾರ್ಯತೆ….uff ತುಂಬಾ ವಿಚಿತ್ರ ಅನ್ಸುತೆ,..
ಒಮ್ಮೊಮ್ಮೆ ನನ್ನನೇ ನಾನೆ ಕೇಳಿದುಂಟು ನೀನಿಲ್ಲಾದ ನನ್ನೋಳಗೆ ನಿನ್ನ ನೆನಪುಗಳಿಗೇನು ಕೆಲಸ,,,? infact ಹಲವು ಬಾರಿ ಮನಸ್ಸಿಲ್ಲಾದ ಮನಸ್ಸೊಂದಿಗೆ ನಿನ್ನ ನೆನಪುಗಳಿಗೆ ತಿಲಾಂಜಲಿ ಇಡೋ  ಪ್ರಯತ್ನ, ಕೊನೆಯಲ್ಲಿ ಎಲ್ಲವೂ ವ್ಯರ್ಥ ..
ಏನೇ ಇರಲಿ,ಏನೇ ಬರಲಿ, ಆ ನಿನ್ನ ನೆನಪು ಸದಾ ನನ್ನೊಂದಿಗೆ ಸತತ,, ನನ್ನೆ ನಾನು ಮರೆತರು, ನನ್ನೊಂದಿಗಿನ ಆ ನಿನ್ನ ನೆನಪು ಮರೆಯಾದ ನನ್ನೊಂದಿಗೆ ಶಾಶ್ವತ,,,  …. ಮರೆತರು ಮರೆಯಾಗದ ಮಾಯೆ ನೀನು….!!!!!!

by ಶಿವರಾಜ್ ಶೆಟ್ಟಿ

ನೀವೂ ಕೂಡ ನಿಮ್ಮ ಬರಹಗಳನ್ನು ನಮಗೆ ಕಳಿಸಬಹುದು . ನಿಮ್ಮ ಬರಹಗಳನ್ನು localkebal@gmail.com ಕಳಿಸಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..