- By Local Kebal Team
- Tuesday, September 5th, 2017
ನಗುವೆ ಏಕೆ ಮನವೇ
ಸನಿಹವಿರುವ ಬಯಕೆಯ
ಎದೆಗೂಡಲಿ ಸಾಕಿಕೊಂಡು
ಅವಳ ದಾರಿ ಕಾಯುವೆ?
ನಗುವೆ ಏಕೆ ಮನವೇ
ಮುಗಿದ ಪ್ರೇಮ ಸಲುಗೆಯ
ಅಳಿಸಿ ಹೋದ ಕಾಗದವ
ಇನ್ನದೆಷ್ಟು ಬಾರಿ ಓದುವೆ?
ನಗುವೆ ಏಕೆ ಮನವೇ
ಬದಿಗಿರಿಸಿ ಬದುಕಿನ ಚಿಂತೆಗಳ
ನೆನಪುಗಳಲೇ ಏಕೆ ಹೀಗೆ
ಕಾಲಹರಣ ಮಾಡುವೆ?
ನಗುವೆ ಏಕೆ ಮನವೇ
ಬದುಕಿನ ಹುಸಿ ಬಣ್ಣಗಳ
ಹುಚ್ಚು ಖುಷಿಯನು ನಂಬಿ
ನಗುತಾ ಮತ್ತೆ ಪ್ರೀತಿಸುವೆ?