5338

ಅಮಂಗಳ

ಮೊನ್ನೆ ನನ್ನ ಫ್ರೆಂಡ್ ಒಬ್ಬಳ ಮದುವೆ ಇತ್ತು. ಹೆಣ್ಣು ಮಕ್ಳಿಗೆ ಸಕ್ಕತ್ತಾಗಿ ready ಆಗೋಕೆ ಒಂದು reason ಸಿಕ್ಕಿದ್ರೆ ಸಾಕು.. full ಜಮಾಯ್ಸಿ ಬಿಡ್ತೀವಿ!! ಅಂತೂ ಇಂತೂ ರೆಡಿ ಆಗಿ choultry ಸೇರೋ ಅಷ್ಟ್ರಲ್ಲಿ ಸುಮಾರು 11:30 am ನಾನೇ ಲೇಟ್ ಅನ್ಕೊಂಡ್ರೆ.. ನನ್ friends ಕೇಳ್ಬೇಕಾ?? ಎಲ್ಲ ಸೇರಿ ಒಂದು ನೂರು selfie ತೊಗೊಂಡ್ರೂ ಇನ್ನೂ ಸಮಾಧಾನ ಇಲ್ಲ.. ಹ್ಹ ಹಾ..
ಮದುವೆ ಮಂಟಪದಲ್ಲಿ ಶಾಸ್ತ್ರ, ಪೂಜೆ ನಡೀತಾನೇ ಇತ್ತು. ಇನ್ನೇನು ತಾಳಿ ಕಟ್ಟಬೇಕು ಅನ್ನೋ ಟೈಮ್ ಅಲ್ಲೇ ನಮ್ಮೆಲರ ಗಮನ ಮಂಟಪದ ಕಡೆಗೆ ಹೋಗಿದ್ದು… “ಎಷ್ಟು ಚೆನ್ನಾಗಿ ಕಾಣಿಸ್ತಾಳೆ ಅಲ್ವಾ?: ಅಂತ ಯಾರೋ ನನ್ನ ಭುಜದ ಮೇಲೆ ಕೈ ಇಟ್ರು. ಯಾರು ಅಂತ ನೋಡಿದ್ರೆ.. ನನ್ ಫ್ರೆಂಡ್ (ಅದೇ ಮದುಮಗಳು), ಅವರ ಅಮ್ಮ. ” ಹೂ ಆಂಟಿ , ತುಂಬಾ ಲಕ್ಷಣವಾಗಿ ಕಾಣಿಸ್ತಾ ಇದ್ದಾಳೆ.. ” ಅಂತ ಅಂದ ನಾನು.. ಆಂಟಿ stage ಮೇಲೆ ಹೋಗೋದು ಬಿಟ್ಟು.. ಇಲ್ಲಿ ಯಾಕೆ ನಿಂತಿದ್ದಾರೆ ಅಂತ ಅನ್ಕೊಂಡು ಕೇಳ್ದೆ..” ನೀವ್ ಏನ್ ಆಂಟಿ ಇಲ್ಲಿ ನಿಂತಿದ್ದೀರಾ? ಓಹ್ guests ನ ಮಾತಾಡ್ಸಕೊಕೆ ಬಂದಿದ್ರಾ?? ” ಅಂದೆ. ಯಾಕೋ ಗೊತ್ತಿಲ್ಲ.. ಆಂಟಿ ಮುಖ ಪೆಚ್ಚಗಾಯ್ತು. ಸುಮ್ಮನೆ ಒಂದು smile ಮಾಡಿ ಮುಂದೆ ಹೋದ್ರು.
ನನ್ ಜೊತೆ ಇದ್ದ friends ಎಲ್ಲಾ ಆಂಟಿ ಹೋದ ತಕ್ಷಣ ಬೈಯೋದಕ್ಕೆ ಶುರು ಮಾಡಿದ್ರು.. ” ನಿಂಗೆ ಅಷ್ಟೂ ಗೊತ್ತಾಗಲ್ವಾ? ಯಾರ್ ಹತ್ರ ಏನ್ ಕೇಳ್ಬೇಕು ಅಂತ. ಆಂಟಿ ಗೆ husband ಇಲ್ಲ.. ಅವರು ಹೇಗೆ ಹಸೆಮಣೆ ಮೇಲೆ ಪೂಜೆ ಗೆ ಕೂರ್ತಾರೆ?” ಅಂತ .. I was literally confused!! — “ಗುರೂ.. ಅದ್ರಲ್ಲಿ ಏನ್ ಇದೆ!! ಗಂಡ ಇಲ್ಲ ಅಂದ್ರೆ, ಹೆಂಡ್ತಿ ಮಗಳನ್ನ ಧಾರೆನೂ ಎರಿಬಾರದು ಅಂದ್ರೆ ಹೇಗೆ? ಯಾರದ್ದೋ ಮನೆ ಪೂಜೆ ಮಾಡ್ತಾ ಇಲ್ಲ ಅವರು….ಅವರ ಮಗಳ ಮದುವೆ ಮಾಡ್ತಾ ಇರೋದು…. ಮಗಳ ಮದುವೆ ಮಾಡೋಕೆ ಅದ್ಯೆಷ್ಟು ಲಕ್ಷ ಸಾಲ ಮಾಡಿದ್ದರೋ ಏನೋ ಆಂಟಿ ಪಾಪ, ಅಂತದ್ರಲ್ಲಿ ಮಗಳು ತಾಳಿ ಕಟ್ಟಿಸ್ಕೊಳೋ time ಅಲ್ಲಿ stage ಮೇಲೆ ನಿಲ್ಲದೆ ಪಾಪ guest ತರಹ ಮದುವೆ ನೋಡ್ತಾ ಇದ್ದರಲ್ಲ !! ” ” ಯಪ್ಪಾ ನಿನ್ನ ಅದಿಕ್ಕೆ ನಾವೆಲ್ಲಾ ಇನ್ನೂ child ಅನ್ನೋದು.. ಗಂಡ ಸತ್ತೋರು ಶುಭಕಾರ್ಯಗಳಿಗೆ ಕೂರಬಾರದು , ಕೂರೋದೂ ಇಲ್ಲ.. ಅದು ಅಮಂಗಳ!! ನಿನಗೆ ಅದೂ ಗೊತ್ತಿಲ್ವ? ! ” ಅಂತ ನನ್ನ ಫ್ರೆಂಡ್ಸ್ ನನ್ನ ಬೈಯೋದನ್ನ ಕಂಟಿನ್ಯೂ ಮಾಡಿದ್ರು .. ” ಈ ಶುಭಕಾರ್ಯ ನಡೀತಿರೋದೇ ಅವರ ಅಮ್ಮನಿಂದ ಅನ್ನೋದ್ ನೀವೆಲ್ಲ ಮರೆತು ಹೋಗಿದ್ದೀರಾ ಅನ್ಸತ್ತೆ .. and more over , ತಾಯಿ ಆಶೀರ್ವಾದ ಯಾವತ್ತಿಗೂ ಅಮಂಗಳ ಅಲ್ಲ. ..” ನಾನ್ ಇಷ್ಟ್ ಹೇಳೋದರ ಒಳಗೆ ನನ್ನ ಸ್ನೇಹಿತೆ ತಾಳಿ ಕಟ್ಟಿಸಿಕೊಂಡಾಗಿತ್ತು, ಅವರಮ್ಮ stage ಕೆಳಗೆ ನಿಂತಿದ್ದರು .. ಅವರ ಕಣ್ತುಂಬಿತ್ತು.. ತಂದೆ ಇಲ್ಲ ಅಂದ್ರೂ, ತಂದೆ-ತಾಯಿ ಎರದೂ ಆಗಿ ಮಗಳನ್ನ ಸಾಕಿದ್ದಾರೆ.. ವಿದ್ಯೆ ಕೊಟ್ಟಿದ್ದಾರೆ.. ಮದುವೆನೂ ಮಾಡಿಸಿದ್ದಾರೆ.. ತನ್ನ ಜೀವನದ ಪರಿವಿಲ್ಲದೆ, ಮಗಳ ಖುಷಿಗೋಸ್ಕರ ಅದ್ಯೆಷ್ಟು ತ್ಯಾಗ ಮಾಡಿದ್ದಾರೋ…!! ನನ್ನ ಯೋಚನೆಗಳು ಸರಿನಾ ತಪ್ಪಾ?? ನನಗೆ ಗೊತ್ತಿಲ್ಲ.. !! ಆದರೆ.. Definitely every mother deserves all the happiness in the world ಅಂತ ಅನಿಸ್ತು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..