3322

Most talented ಯತೀಶ್ ಪಲ್ಲಡ್ಕ ಎಂಬ ತುಳು ಭಾಷೆಯ dubsmash superstar

  • By Nithish k
  • Saturday, December 23rd, 2017
  • Ankanagalu

ಎಂಕುಲು ಎರೆಗ್ಲಾ ಕಮ್ಮಿ ಇಜ್ಜಿ..!!! ನಮ ಇಂಚನೆ…!!! ಎಂದು ವೇಗದಲ್ಲಿ ಬೆಳೆಯುತ್ತಿರುವ ತುಳು ಚಿತ್ರರಂಗ…
ನಾವು ಯಾರಿಗೂ ಕಮ್ಮಿ ಇಲ್ಲ ನಮ್ಮಲ್ಲೂ ಅನೇಕ ಪ್ರತಿಭೆಗಳಿವೆ ಎಂದು ಮೊದಲು ಕರಾವಳಿಯಲ್ಲಿ ತೋರಿಸಿಕೊಟ್ಟದ್ದು ತುಳು ನಾಟಕಗಳು, ಹಾಗೂ ಇತ್ತೀಚಿನ ಸೂಪರ್ ಹಿಟ್ ತುಳು ಚಿತ್ರಗಳು..ನಮ್ಮಲ್ಲೂ 100 ದಿನ ಓಡುವ ಚಿತ್ರಗಳಿವೆ ಎಂದು ಎದೆ ತಟ್ಟಿಕೊಂಡು ಹೇಳುವಂತ ಸಿನಿಮಾಗಳು..

ಹಾಸ್ಯವೆ ತುಳು ಚಿತ್ರರಂಗದ ಜೀವಾಳ. ಪ್ರೇಕ್ಷಕರನ್ನು ನಕ್ಕು ನಗಿಸಿ ಹೊಟ್ಟೆ ಹುಣ್ಣಾಗಿಸುವ ಅತ್ಯುತ್ತಮ ಕಲಾವಿದರ ದಂಡೆ ನಮ್ಮ ತುಳು ಚಿತ್ರರಂಗದಲ್ಲಿದೆ. ಯಾವ ಭಾಷೆಯ ಹಾಸ್ಯ ನಟರಿಗೂ ನಾವೇನು ಕಮ್ಮಿ ಇಲ್ಲ ಎಂದು ಬೆಳೆದಿರುವ ನಟರು. ಉದಾಹರಣೆಗೆ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್, ಅರವಿಂದ ಬೋಳಾರ್ ಹಾಗೂ ಇತ್ತೀಚಿನ ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು..

ಈಗ ಅದೇ ದಾರಿಯಲ್ಲಿ ಸಾಗುತ್ತಿರುವ ಯುವ ಪ್ರತಿಭೆ ಯತೀಶ್ ಪೂಜಾರಿ ಪಲ್ಲಡ್ಕ. ಮೂಡಬಿದ್ರೆಯ ಪಲ್ಲಡ್ಕದವರಾದ ಇವರು ಶ್ರೀ ಧವಳ ಕಾಲೇಜ್ ನಲ್ಲಿ ಡಿಗ್ರಿ ವ್ಯಾಸಂಗ ಮುಗಿಸಿ ಪ್ರಸ್ತುತ ಮೂಡಬಿದ್ರೆ ಯಲ್ಲಿ ಓದುತ್ತಿದ್ದಾರೆ. ಸದ್ಯ ಇವರು ತುಳು dubsmash ನ ಬೇಡಿಕೆಯ ನಟ. ತನ್ನ dubsmash ವೀಡಿಯೋಗಳಿಂದಲೇ ಫೇಸ್ಬುಕ್ನಲ್ಲಿ ಅತಿ ಹೆಚ್ಚು ಫ್ಯಾನ್ ಗಳನ್ನು ಹೊಂದಿದ್ದಾರೆ. ವೀಡಿಯೋ ಅಪ್ಲೋಡ್ ಮಾಡಿದ ಕೆಲವೇ ಘಂಟೆಗಳಲ್ಲಿ ಸಾವಿರಾರು ಲೈಕ್ಸ್ ಹಾಕು ನೋಡುಗರು. ಟ್ರೋಲ್ ಪೇಜ್ ಗಳಲ್ಲಿ ಇವರದ್ದೇ ಹವಾ. ತಾನು ಯಾವ ನಟರಿಗೂ ಕಮ್ಮಿ ಇಲ್ಲ ಎಂಬಂತೆ ಇವರ ನಟನೆಯ ವೀಡಿಯೋ ಗಳು ಫೇಸ್ಬುಕ್ನಲ್ಲಿ ಹರಿದಾಡ್ತಾ ಇದೆ.
ನಟನಾಗಬೇಕಂಬ ಬಯಕೆಯ ಇವರು ಅವಕಾಶ ಇಲ್ಲದೆ ಇರುವಾಗ ಇವರ ಕೈ ಹಿಡಿದಿದ್ದು dubsmash ಎನ್ನುವ ಅಪ್ಲಿಕೇಶನ್. ಏನಿದು dubsmash ಅಂದ್ರೆ ಯಾವದೇ ಸಿನಿಮಾ ಹಾಗೂ ನಾಟಕದ ಸಂಭಾಷಣೆಯ ಆಡಿಯೋ ಗೆ ಆಕ್ಟಿಂಗ್ ಮಾಡೋದು. ಎರೆಗಾವುವೆ ಕಿರಕಿರಿ.. ಉಂದು ರಗಾಳೆ ಇಜ್ಜಿ..dubsmash ವೀಡಿಯೋ ಮಲ್ಪುನಿ ಫೇಸ್ಬುಕ್ ಡ್ ಪಾಡುನಿ ಅಂತ ಯತೀಶ್ ಪಲ್ಲಡ್ಕ ಅವ್ರು ಆಯ್ಕೆ ಮಾಡಿಕೊಂಡದ್ದು ತುಳು ಚಿತ್ರರಂಗದ ಹಾಸ್ಯ ತುಣುಕುಗಳನ್ನು. ಕಲೆಗೆ ಎಲ್ಲಿದ್ರೂ ಬೆಲೆ ಇರುತ್ತೆ ಅನ್ನೋದಕ್ಕೆ ಇವರೇ ಸಾಕ್ಷಿ. ತನ್ನ ವೀಡಿಯೋಗಳಿಂದಲೇ ತುಳು ಚಿತ್ರರಂಗದ ಭವಿಷ್ಯದ ಹಾಸ್ಯ ನಟರಾಗುವ ಎಲ್ಲಾ ಲಕ್ಷಣಗಳನ್ನು ಇವರಲ್ಲಿ ನೋಡ್ಬೋದು. ತನ್ನ ಅತ್ಯದ್ಬುತ ನಟನಾ ಕೌಶಲ್ಯದಿಂದ ಆತೀ ವೇಗದಲ್ಲಿ ಪ್ರಖ್ಯಾತಿಯನ್ನು ಪಡೆದರು. ಒರಿಜಿನಲ್ ನಟರನ್ನು ಹುಬ್ಬೇರಿಸುವಂತೆ ನಟಿಸುತ್ತಾರೆ ಈ ಯತೀಶ್ ಪಲ್ಲಡ್ಕರವರು.
ಇಷ್ಟೆಲ್ಲ ನಟನೆ ಮಾಡ್ಬೇಕಾದ್ರೆ ಯಾರಾದರೊಬ್ಬರು ಗುರು ಇರ್ಲೇಬೇಕಲ್ಲ. ಇವರ ಬಳಿ ಕೇಳಿದಾಗ ಹೇಳ್ತಾರೆ ತುಳು ಚಿತ್ರರಂಗದ ತೆಲಿಕಿದ ಬೊಳ್ಳಿ ಎಂದೇ ಖ್ಯಾತರಾಗಿವ ದೇವದಾಸ್ ಕಾಪಿಕಾಡರೆ ಇವರ ಗುರು ಅಂತ..
ಇವರ ಕನಸು ಚಿತ್ರರಂಗದಲ್ಲಿ ಒಳ್ಳೆ ಹಾಸ್ಯ ನಟರಾಗಬೇಕೆಂದು ಮತ್ತು ತನ್ನ ಗುರು ದೇವದಾಸ್ ಕಾಪಿಕಾಡ್ ಜೊತೆ ನಟನೆ ಮಾಡಬೇಕೆಂದು. ಅವರ ಕನಸು ಆದಷ್ಟು ಬೇಗ ನನಸಾಗಲೆಂದು ಲೋಕಲ್ ಕೇಬಲ್ ಟೀಮ್ ಹಾರೈಸುತ್ತದೆ.
ಅವರ ಇನ್ನಷ್ಟು ವಿಡಿಯೋ ನೋಡಲು ಅವರ ಫೇಸ್ಬುಕ್ ಪ್ರೊಫೈಲ್ ಗೆ ವಿಸಿಟ್ ಕೊಡಿ
ಯತೀಶ್ ಅವರ ಡಬ್ಸ್ಮ್ಯಾಶ್ ವಿಡಿಯೋ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..